# Tags
#ಶಾಲಾ ಕಾಲೇಜು

ದಂಡತೀರ್ಥ ವಿದ್ಯಾ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಸಮಾರಂಭ (School Day Celebration at Kaup Dandatheertha education Society)

ದಂಡತೀರ್ಥ ವಿದ್ಯಾ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಸಮಾರಂಭ

(Kaup) ಕಾಪು: ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ದಿನಾಂಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವ ಸಮಾರಂಭವು ನೆರವೇರಿತು..

 ಮುಖ್ಯ ಅತಿಥಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್‌ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು ಮಾತನಾಡಿ, ದಿವಂಗತ ಡಾ. ಕೆ. ಪ್ರಭಾಕರ ಶೆಟ್ಟಿಯವರ ದೂರದರ್ಶಿತ್ವದಿಂದಾಗಿ ಈ ಕಾಲೇಜು ಪ್ರಾರಂಭವಾಯಿತು. ಪ್ರಸ್ತುತ ಈ ಸಂಸ್ಥೆ ಹಲವಾರು ಮಂದಿಗೆ ಜೀವನದ ಬೆಳಕು ನೀಡಿದೆ. ಇಂತಹ ಅಪೂರ್ವ ಸಾಧನೆಯನ್ನು ಮಾಡಿದ ಈ ವಿದ್ಯಾಸಂಸ್ಥೆಯು ಇನ್ನಷ್ಟು ಪ್ರಗತಿಯನ್ನು ಕಾಣುವಂತಾಗಲಿ ಎಂದು ಶುಭ ಹಾರೈಸಿದರು.

  ದoಡತೀರ್ಥ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸೀತಾರಾಮ ಭಟ್ ಮಾತನಾಡಿ, ಶಾಲೆಯ ಸಂಸ್ಥಾಪಕ ದಿವಂಗತ ಡಾ. ಕೆ. ಪ್ರಭಾಕರ ಶೆಟ್ಟಿಯವರು ನನ್ನ ಸನ್ಮಿತ್ರ. ಶಿಕ್ಷಣದ ಬಗ್ಗೆ ಅತೀವ ಕಾಳಜಿ ವಹಿಸಿದವರು. ಇಂದು ಅವರು ಬೆಳೆಸಿದ ವಿದ್ಯಾಸಂಸ್ಥೆ ಹೆಮ್ಮರವಾಗಿದೆ. ವಿದ್ಯಾರ್ಥಿಗಳಾದ ತಾವು ಶಿಸ್ತು ಸಹಿತ ಶಿಕ್ಷಣವನ್ನು ಪಡೆದು, ದೇಶಭಕ್ತಿ ಭಾವನೆಯನ್ನು ಬೆಳೆಸುವವರಾಗಿ ಎಂಬ ಸಂದೇಶ ನೀಡಿದರು.

   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಚಾಲಕರಾದ ಡಾ. ಕೆ. ಪ್ರಶಾಂತ್ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಹೆತ್ತವರು ಸಮಾರಂಭದ ಯಶಸ್ಸಿಗೆ ದುಡಿದಿದ್ದಾರೆ. ಪದವಿ ಪೂರ್ವ ಕಾಲೇಜಿನ ರಜತ ವರ್ಷಾಚರಣೆಗೆ ಇದೇ ರೀತಿಯ ಸಹಕಾರವನ್ನು ನೀಡಿ, ವಿದ್ಯಾಸಂಸ್ಥೆಯ ಪ್ರಗತಿಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.

 ಕಾರ್ಯಕ್ರಮದಲ್ಲಿ ಕಾಪು ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಹಾಗೂ ಕರ್ನಾಟಕ ರಾಜ್ಯ ರುಪ್ಸಾ ಸಂಸ್ಥೆಯು ನೀಡಿದ ಕರ್ನಾಟಕ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತರಾದ ಸಂಸ್ಥೆಯ ಪ್ರಾಂಶುಪಾಲ ಎಂ. ನೀಲಾನಂದ ನಾಯ್ಕ್‌ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

 ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಟ್ರಸ್ಟ್ ನ ಅಧ್ಯಕ್ಷೆ ಶೋಭಾ ಪಿ. ಶೆಟ್ಟಿ, ಪ್ರಶಾಂತ್ ಪ್ಯಾರಾಮೆಡಿಕಲ್ ಕಾಲೇಜಿನ ನಿರ್ದೇಶಕಿ ಡಾ. ಪನ್ನಾ ಪಿ. ಶೆಟ್ಟಿ, ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಂಶುಪಾಲ ನೀಲಾನಂದ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥರುಗಳಾದ ಗೇಬ್ರಿಯಲ್ ಮಸ್ಕರೇನ್ಹಸ್, ಕೃಪಾ ಅಮ್ಮನ್ನ, ರಾಜಲಕ್ಷ್ಮಿ ಜಿ. ರಾವ್, ಕನ್ನಡ ಮಾಧ್ಯಮ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಮಲತಾ ಉಪಸ್ಥಿತರಿದ್ದರು.

 ವಿದ್ಯಾರ್ಥಿಗಳಾದ ಸಮೃದ್ಧಿ ಸ್ವಾಗತಿಸಿದರು. ಸಾನ್ವಿ ಆರ್. ಶೆಟ್ಟಿ, ಶಿಫಾನ ಐ., ಮೊಹಮ್ಮದ್ ಅದಾನ್ ಮತ್ತು ಪ್ರಜ್ಞಾ ನಿರೂಪಿಸಿದರು.

ಶ್ರವಣ್ ಕುಮಾರ್ ವಂದಿಸಿದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2