ಮೂಲ್ಕಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಳೆ ಆರೋಪಿ ಬಂಧನ (Moolki : An old accused who absconded without appearing in court was arrested)
ಮೂಲ್ಕಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಳೆ ಆರೋಪಿ ಬಂಧನ
(Moolki) ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ಕಳ್ಳತನ ಪ್ರಕರಣವೊಂದರಲ್ಲಿ ಸುಮಾರು 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವ ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಅತ್ತೂರು ನಿವಾಸಿ ಸುರೇಶ ಪೂಜಾರಿ(52) ಎಂಬಾತನನ್ನು ದಾವಣಗೆರೆ ಜಿಲ್ಲೆಯ ಸವಲಂಗ ಎಂಬಲ್ಲಿ ಮೂಲ್ಕಿ ಪೊಲೀಸರು ದಸ್ತಗಿರಿ ಮಾಡಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂದನ ವಿಧಿಸಿದೆ
ಆರೋಪಿ ಸುರೇಶ್ ಪೂಜಾರಿ ವಿವಿಧ ಕಳ್ಳತನ ಪ್ರಕರಣದಲ್ಲಿ ಶಾಮಿಲಾಗಿದ್ದು ಈತನ ಮೇಲೆ ಧರ್ಮಸ್ಥಳ ಠಾಣೆ, ಬೆಳ್ತಂಗಡಿ ಠಾಣೆ,ಉಡುಪಿ ನಗರ ಠಾಣೆ, ಹೆಬ್ರಿ ಠಾಣೆ, ಶಿರ್ವ ಠಾಣೆ, ಹಿರಿಯಡ್ಕ ಠಾಣೆ, ಪಡುಬಿದ್ರೆ ಠಾಣೆ, ಕಾರ್ಕಳ ನಗರ ಠಾಣೆ, ದಾವಣಗೆರೆ ಗ್ರಾಮಾಂತರ ಠಾಣೆ ಹಾಗೂ ಮಹಾರಾಷ್ಟ್ರ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ವಿದ್ಯಾಧರ್ ಡಿ ಬೈಕೇರಿಕರ್ ಹಾಗೂ ಪೊಲೀಸ್ ಉಪ ನಿರೀಕ್ಷರಾದ ಅನಿತಾ ರವರ ಮಾರ್ಗದರ್ಶನದಲ್ಲಿ, ಠಾಣಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರವರಾದ ಉದಯ, ಜಯರಾಮ್ ಜೆ ರವರು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.