# Tags
#ಅಪರಾಧ #ಮನೋರಂಜನೆ

ಕಾಂತಾರ ಚಾಪ್ಟರ್ 1 ಚಿತ್ರದ ಚಿತ್ರೀಕರಣದಲ್ಲಿ ಜ್ಯೂನಿಯರ್ ಆರ್ಟಿಸ್ಟ್‌ಗಳಿಗೆ ಮೋಸ, ಆಕ್ರೋಶ (Junior artists cheated on the sets of Kantara Chapter 1, Outrage)

ಕಾಂತಾರ ಚಾಪ್ಟರ್ 1 ಚಿತ್ರದ ಚಿತ್ರೀಕರಣದಲ್ಲಿ ಜ್ಯೂನಿಯರ್ ಆರ್ಟಿಸ್ಟ್ಗಳಿಗೆ ಮೋಸ, ಆಕ್ರೋಶ

(Udupi) ಉಡುಪಿ: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮುಂದಿನ ಅಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಲು ಚಿತ್ರತಂಡ ಶೂಟಿಂಗ್ ಮುಗಿಸುವ ತರಾತುರಿಯಲ್ಲಿದ್ದಾರೆ. ಈ ನಡುವೆ ಕಾಂತಾರ ಚಿತ್ರದ ಸೆಟ್ ನಲ್ಲಿ ಶೂಟಿಂಗ್ ಮುಗಿಸಿ ಬಂದ ಜ್ಯೂನಿಯರ್ ಕಲಾವಿದರು ದಿಢೀರ್ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ನಮಗೆ ಸರಿಯಾಗಿ ಸಂಭಾವನೆ ಹಣ ಕೊಡದೇ ಅನ್ಯಾಯ ಮಾಡುತ್ತಿದ್ದಾರೆ, ಎಂದು ಕೆಲ ಜ್ಯೂನಿಯರ್ ಆರ್ಟಿಸ್ಟ್‌ಗಳು ಬೇಸರ ಹೊರಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಚಾಪ್ಟರ್- 1 ಸಿನಿಮಾ ಚಿತ್ರೀಕರಣ ಕುಂದಾಪುರದ ಬಳಿಯ ಕೆರಾಡಿಯಲ್ಲಿ ಭರದಿಂದ ಸಾಗುತ್ತಿದೆ. ಸದ್ಯ 60 ದಿನಗಳ ದೊಡ್ಡ ಶೆಡ್ಯೂಲ್ ಆರಂಭವಾಗಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಸಂಪೂರ್ಣಗೊಳ್ಳುವ  ನಿರೀಕ್ಷೆಯಿದೆ.

ಕಾಂತಾರ ೧ ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರು ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಾಂತಾರ-1 ಜೊತೆಗೆ ಸಲಾರ್-2 ಚಿತ್ರೀಕರಣ ಕೂಡ ನಡೀತಿದೆ.

  ಕಾಂತಾರ-1 ಸಿನಿಮಾ ಮುಂದಿನ ಆಗಸ್ಟ್ ವೇಳೆಗೆ ತೆರೆಗೆ ಬರಲಿದೆ. ಚಿತ್ರದಲ್ಲಿ ಒಂದಷ್ಟು ಜ್ಯೂನಿಯರ್ ಕಲಾವಿದರು ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚು ಜನರು ಸೇರುವ ಸನ್ನಿವೇಶಗಳನ್ನು ಚಿತ್ರಿಸಲು ಜ್ಯೂನಿಯರ್ ಆರ್ಟಿಸ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಅದೇ ರೀತಿ ಕಾಂತಾರ-1 ಚಿತ್ರದಲ್ಲಿ ಬೆಂಗಳೂರು, ಕೇರಳಾದಿಂದ ಕೂಡ ಒಂದಷ್ಟು ಜನರನ್ನು ಕರೆಸಲಾಗಿದೆ. ಆದರೆ ನಮಗೆ ಸರಿಯಾದ ಸಮಯಕ್ಕೆ ಸಂಭಾವನೆ ನೀಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೆಲವರು ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಒಂದಷ್ಟು ಮಹಿಳೆಯರು ಕೂಡ ನಮಗೆ ಪೇಮೆಂಟ್  ಸಿಕ್ಕಿಲ್ಲ. ಎಲ್ಲರಿಗೂ ರೀತಿ ಸಮಸ್ಯೆ ಆಗಿದೆ ಎಂದು ಹೇಳುವುದು ಕಂಡು ಬಂದಿದೆ. ಸರಿಯಾಗಿ ಊಟ ಕೂಡ ಇಲ್ಲ, ಕೇಳಿದಷ್ಟು ಇಡ್ಲಿ, ಚಪಾತಿ ಕೊಡಲ್ಲ ಎಂದೂ ಅಸಮಾಧಾನ ಹೊರ ಹಾಕಿದ್ದಾರೆ. ಒಂದು ಚಿತ್ರೀಕರಣ ಇದೆ ಎಂದು ಕರೆಸಿ ಒಂದೇ ವಾರಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ. ಅವರು ಕೊಡುವ ಹಣ ನಮ್ಮ ಬಸ್ ಚಾರ್ಜ್‌ಗೂ ಸಾಲಲ್ಲ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

 ಚಿತ್ರೀಕರಣದಲ್ಲಿ ತೊಡಗಿರುವ ಕಾಂತಾರ ಸಿನಿಮಾ ತಂಡಕ್ಕೆ ಜ್ಯೂನಿಯರ್  ಆರ್ಟಸ್ಟ್ ಪೇಮೆಂಟ್ ವಿಚಾರದಲ್ಲಿ ಪ್ರತಿಭಟನೆ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಮುಂದೆ ಈ ವಿಚಾರವನ್ನು ಹೊಂಬಾಳೆ ಸಂಸ್ಥೆ ಮತ್ತು ಕಾಂತಾರ ಚಿತ್ರ ತಂಡ ಯಾವ ರೀತಿ ಸಮರ್ಥನೆ ನೀಡುತ್ತದೆ ಎಂನ್ನುವುದನ್ನು ಕಾದು ನೋಡಬೇಕಾಗಿದೆ.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2