ಕೋವಿಡ್ ಕಾಲದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Corruption in the time of Covid : Minister Laxmi Hebbalkar)
ಕೋವಿಡ್ ಕಾಲದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
(Bengaluru) ಬೆಂಗಳೂರು : ಕೋವಿಡ್ ಕಾಲದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದ್ದು, ಇದರ ಬಗ್ಗೆ ಸತ್ಯಾಂಶ ಏನು ಅನ್ನೋದು ಜನರಿಗೆ ಗೊತ್ತಿದೆ. ಕೋವಿಡ್ ಹಗರಣದ ಬಗ್ಗೆ ಜನ ಸಾಮಾನ್ಯರಿಗೂ ಗೊತ್ತಿದೆ. ಸರ್ಕಾರ ಈಗಾಗಲೇ ದಾಖಲೆಗಳನ್ನು ಬಿಡುಗಡೆ ಮಾಡಿದೆ ಎಂದು ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕೋವಿಡ್ ಹಗರಣ ಅಗಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ. ಹತ್ತು ಸಾವಿರ ಕೋಟಿ ಹಗರಣ ಆಗಿದೆ ಎಂದು ಯತ್ನಾಳ್ ಆರೋಪಿಸಿದ್ದರು. ಈಗ ಮುಂದುವರೆದ ಭಾಗವಾಗಿ ತನಿಖೆ ನಡೆಯುತ್ತಿದೆ ಎಂದೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಗೃಹಲಕ್ಷ್ಮೀ ಬಗ್ಗೆ ಮಹಿಳೆಯರಿಂದ ಧನ್ಯತಾಭಾವ
ಪಂಚ ಗ್ಯಾರಂಟಿ ಯೋಜನೆಗಳಿಂದ ಉಪ ಚುನಾವಣೆಗೆ ಅನುಕೂಲ ಆಗಲಿದ್ದು, ನಾನು ಹೋದ ಕಡೆಯಲ್ಲೆಲ್ಲಾ ಮಹಿಳೆಯರು ಧನ್ಯತಾಭಾವ ತೋರುತ್ತಿದ್ದಾರೆ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ 1 ಕೋಟಿ 28 ಲಕ್ಷ ಜನ ಅರ್ಹರಿದ್ದು, ನೊಂದಣಿ ಮಾಡಿಕೊಂಡಿರುವ 1 ಕೋಟಿ 25 ಲಕ್ಷ ಮಹಿಳೆಯರಿಗೆ ಹಣ ತಲುಪುತ್ತಿದೆ. ಸುಮಾರು 82 ಸಾವಿರ ಮಹಿಳೆಯರಿಗೆ ವಿವಿಧ ಕಾರಣಗಳಿಂದ ಹಣ ಹೋಗಿಲ್ಲ. ಅದರಲ್ಲಿ ನಮ್ಮ ತಪ್ಪಿಲ್ಲ. ಇಂತಹ ಪ್ರಕರಣಗಳಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಹಿಂಬರಹ ಬರೆದುಕೊಡಲಾಗಿದೆ ಎಂದೂ ಸಚಿವೆ ಹೇಳಿದರು.