# Tags
#ಶಾಲಾ ಕಾಲೇಜು

ಅದಮಾರು ಪಿಪಿಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವ (Adamaru PPC English Medium High Scchool Anniversary)  

ಅದಮಾರು ಪಿಪಿಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವ  

(Adamaru) ಅದಮಾರು:  ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಗುರುವಾರ ನೆರವೇರಿತು.

  ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿದರು.

ಅವರು ತಮ್ಮ ಆಶೀರ್ವಚನದಲ್ಲಿ, ಆಂಗ್ಲ ಮಾಧ್ಯಮವಾದರೂ ಭಾರತೀಯ ಸಂಸ್ಕೃತಿಯನ್ನು ಬಿಡಬಾರದು. ಮಕ್ಕಳ ಜೊತೆ ಹೆತ್ತವರು ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಅವರನ್ನು ಒಂಟಿಯಾಗಿ ಬಿಡಬಾರದು. ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ನಾವು ಒತ್ತು ನೀಡಬೇಕು. ಮೊಬೈಲ್ ಹಾಗೂ ಇನ್ನಿತರ ಮನೋರಂಜನಾ ವಸ್ತುಗಳ ಕಡೆಗೆ ಹೆಚ್ಚು ಗಮನ  ಕೊಡದಂತೆ ಅವರನ್ನು ಸೃಜನಾತ್ಮಕ ಕಾರ್ಯದಲ್ಲಿ  ತೊಡಗಿಸಿಕೊಳ್ಳಬೇಕೆಂದ ಸ್ವಾಮೀಜಿ, ಶಿಕ್ಷಕರು ಮಕ್ಕಳಲ್ಲಿ ಸೃಜನಶೀಲತೆಯ ಬೆಳೆಸಿ, ಮಕ್ಕಳ ಜೊತೆ ಉತ್ತಮ ಬಾಂಧವ್ಯವನ್ನು ಬೆಳೆಸಿಬೇಕೆಂದು ಕಿವಿ ಮಾತು ಹೇಳಿದರು.

  ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕೋಶಾಧಿಕಾರಿ ಗಣೇಶ ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ್ಕಕೆ ಶುಭ ಹಾರೈಸಿರು.

  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎರ್ಮಾಳು ಉದಯ ಕೆ ಶೆಟ್ಟಿಯವರು ಶುಭಹಾರೈಸಿದರು.

ಪೂರ್ಣ ಪ್ರಜ್ಞ ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ, ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆಯ  ಮುಖ್ಯ ಶಿಕ್ಷಕ ಶ್ರೀಕಾಂತ ರಾವ್, ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಎ.ವಿ, ವಿದ್ಯಾರ್ಥಿ ನಾಯಕ ಶಮೃತ್ ಉಪಸ್ಥಿತರಿದ್ದರು.

ವಿನುತಾ ಸ್ವಾಗತಿಸಿದರು. ನಂದನ್ ಆರ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಭೂಮಿಕಾ ವಂದಿಸಿದರು.

  ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ನೆರವೇರಿತು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2