ಉಚ್ಚಿಲ ದೇಗುಲದಲ್ಲಿ ಮಹೇಶ್ ಉಚ್ಚಿಲರವರಿಗೆ ಶೃದ್ಧಾಂಜಲಿ (Tribute to Mahesh Uchila at Uchila Mahalingeshwara temple)
ಉಚ್ಚಿಲ ದೇಗುಲದಲ್ಲಿ ಮಹೇಶ್ ಉಚ್ಚಿಲರವರಿಗೆ ಶೃದ್ಧಾಂಜಲಿ
ಮೃತರ ಕುಟುಂಬದ ಸುಖ ದುಃಖಗಳಲ್ಲಿ ಬಾಗಿಯಾಗುವುದೇ, ಮೃತರಿಗೆ ನೀಡುವ ಶೃದ್ಧಾಂಜಲಿ : ವಿಷ್ಣುಮೂರ್ತಿ ಉಪಾಧ್ಯಾಯ
ಉಚ್ಚಿಲ: ಇತ್ತೀಚೆಗೆ ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟ ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಮಹೇಶ್ ಉಚ್ಚಿಲರವರಿಗೆ
ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ಸಭಾಭವನದಲ್ಲಿ ಮಹೇಶ್ ಉಚ್ಚಿಲ ರವರ ಅಭಿಮಾನಿ ಬಳಗ ಆಯೋಜಿಸಿದ ಶೃದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಮತ್ತು ಪುಷ್ಪಾಂಜಲಿ ಸಮರ್ಪಿಸಲಾಯಿತು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ ಅರ್ಚಕ ವಿಷ್ಣುಮೂರ್ತಿ ಉಪಾಧ್ಯಾಯ ನುಡಿ ನಮನ ಸಲ್ಲಿಸಿ, ಮನುಷ್ಯ ಹೇಗೆ ಹುಟ್ಟಿದ ಎಂಬುದು ಮುಖ್ಯವಲ್ಲ. ಆತ ಹೇಗೆ ಬದುಕಿದ ಎಂಬುದು ಮುಖ್ಯ. ಸಮಜಮುಖಿಯಾಗಿ ಬದುಕು ಸಾಗಿಸಿದ ಮಹೇಶ್ ಉಚ್ಚಿಲ, ಹಿಂದೂ ಸಂಘಟನೆಗಳ ಮೂಲಕ ಸಮಾಜ ಸೇವೆ ನಡೆಸಿ ಸಾರ್ಥಕ ಬದುಕು ಬದುಕಿದ್ದ. ಆದರೆ ಕಿರು ವಯಸ್ಸಿನಲ್ಲಿ ನಮ್ಮನಗಲಿದ ಮಹೇಶ್ ಉಚ್ಚಿಲರವರ ಕುಟುಂಬ ವೇಧನೆ ಅನುಭವಿಸುತ್ತಿದ್ದು, ಅವರ ಕುಟುಂಬದೊಂದಿಗೆ ಅವರ ಸುಖ ದುಃಖದಲ್ಲಿ ಬಾಗಿಯಾಗುವುದೇ ಮೃತರಿಗೆ ನೀಡುವ ಶೃದ್ದಾಂಜಲಿ ಎಂದರು.
ಈ ಸಂದರ್ಭ ಹಿಂದೂ ಸಂಘಟನೆಯ ಮುಖಂಡ ಸುನೀಲ್ ಕೆ. ಆರ್ ಸಹಿತ ಗಣ್ಯರು ನುಡಿ ನಮನ ಸಲ್ಲಿಸಿದರು.
ಸಂಘಟನೆಯ ಮುಖಂಡರಾದ ಸುರೇಶ್ ಹೆಜಮಾಡಿ, ಕಿಶೋರ್ ಕುಂಜೂರು, ರಾಜೇಶ್ ಉಚ್ಚಿಲ, ಚಂದ್ರಶೇಖರ ಶೆಟ್ಟಿ ಉಚ್ಚಿಲ, ಗುರುರಾಜ್ ಉಚ್ಚಿಲ, ವಸಂತ ದೇವಾಡಿಗ, ನಿತೇಶ್ ಎರ್ಮಾಳು, ಮನೋಜ್ ಶೆಟ್ಟಿ, ಸಚಿನ್ ಶೆಟ್ಟಿ, ಪ್ರಸಾದ್ ಅಂಚನ್, ದಿವಾಕರ್ ಶೆಟ್ಟಿ ಉಚ್ಚಿಲ, ಪ್ರಸಾದ್ ಉಚ್ಚಿಲ, ಇಂದಿರಾ ಶೆಟ್ಟಿ, ನಿರ್ಮಲ ರಾಕೇಶ್ ಮತ್ತಿತರು ಉಪಸ್ಥಿತರಿದ್ದರು.