ಉಚ್ಚಿಲ – ಪಾದಚಾರಿಗೆ ಬಸ್ಸು ಡಿಕ್ಕಿ,(Accident at Uchila)
(Uchila) ಉಚ್ಚಿಲ – ಪಾದಚಾರಿಗೆ ಬಸ್ಸು ಡಿಕ್ಕಿ, ಸಾವು.
ಉಚ್ಚಿಲ : ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೋರ್ವರಿಗೆ ಸರಕಾರಿ ಬಸ್ಸು ಡಿಕ್ಕಿ ಹಿಡೆದ ಪರಿಣಾಮ, ಅವರು ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಪಟ್ಟವರನ್ನು ಉಚ್ಚಿಲ ಪಡುವಿನ ನಿವಾಸಿ ಶಿವಣ್ಣ (65)ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಉಡುಪಿಗೆ ಸಾಗುತ್ತಿದ್ದ ಸರಕಾರಿ ಬಸ್ಸು ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಗುದ್ದಿದೆ.
ತೀವ್ರ ಗಾಯಗೊಂಡ ಅವರನ್ನು ಉಚ್ಚಿಲ ದ ಎಸ್ ಡಿ ಪಿ ಐ ಅಂಬುಲೆನ್ಸ್ ನಲ್ಲಿ ಉಡುಪಿಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆಯ ಹಾದಿಯಲ್ಲಿ ಅವರು ಕೊನೆ ಉಸಿರೆಳೆದಿದ್ದಾರೆ.
ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಪರಿಸರದಲ್ಲಿ ದಿನ ನಿತ್ಯ ಅಪಘಾತ ಸಂಭವಿಸುತ್ತಿದೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.