ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ 37ನೇ ವರ್ಷದ ವಾರ್ಷಿಕೋತ್ಸವ (37th School day of Uchila Mahalaxmi School)
ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ 37ನೇ ವರ್ಷದ ವಾರ್ಷಿಕೋತ್ಸವ
(Uchila) ಉಚ್ಚಿಲ : ಉಚ್ಚಿಲ ಮೊಗವೀರ ಹಿತ ಸಾಧನ ವೇದಿಕೆ ಸಂಚಾಲಿತ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಮಂಗಳವಾರ ಶಾಲಾ ಆವರಣದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಬಿ ಎಸ್ ಎಫ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗಾಧಿಕಾರಿ ಸಂತೋಷ ಪೈ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಶಿಕ್ಷಕರು, ತಂದೆ ತಾಯಿ ಹಾಗೂ ಹಿರಿಯರ ಮಾತನ್ನು ಮೀರಿ ಮುಂದೆ ಸಾಗದಿರಿ. ಇದರಲ್ಲಿ ನಿಮ್ಮ ಜೀವನ ಅಡಕವಾಗಿದೆ. ಹೆಚ್ಚಿನ ಶ್ರಮ ವಹಿಸಿ ಕಲಿತರೆ ನಿಮ್ಮ ಜೀವನ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.
ಈ ಸಂದರ್ಭ ದಾನಿಗಳಾದ ಶೇಖರ್ ಸಾಲ್ಯಾನ್ ದಂಪತಿಗಳನ್ನು ಹಾಗೂ ಸಂತೋಷ್ ಪೈ ಯವರನ್ನು ಸನ್ಮಾನಿಸಲಾಯಿತು.
ಶಾಲೆಗೆ ಒಂದು ಲಕ್ಷ ಐದು ಸಾವಿರ ವೆಚ್ಚದಲ್ಲಿ ಬಿ ಎಸ್ ಎಫ್ ಸಂಸ್ಥೆ ನೀಡಿದ ವಾಟರ್ ಕೂಲರನ್ನು ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂಎಸ್‌ರವರು ಉದ್ಘಾಟಿಸಿದರು.
ಮೊದಲಿಗೆ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂ ಎಸ್ ಶಾಲಾ ಧ್ವಜಾರೋಹಣಗೈದರು.
ಅತಿಥಿಗಳು ಶಾಲಾ ವಿದ್ಯಾರ್ಥಿಗಳ ಮ್ಯಾಗಝಿನ್ ಬಿಡುಗಡೆಗೊಳಿಸಿದರು.
ಇದೇ ಸಂದರ್ಭ ಒಂದರಿಂದ 10ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಶಾಲಾ ಸಂಚಾಲಕ ಗಂಗಾಧರ್ ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮೊಗವೀರ ಹಿತ ಸಾಧನ ವೇದಿಕೆಯ ಅಧ್ಯಕ್ಷ ಸರ್ವೋತ್ತಮ ಕುಂದರ್, ವಿದ್ಯಾಂಗ ಇಲಾಖಾ ಅಧಿಕಾರಿ ಯಲ್ಲಮ್ಮ, ಉದ್ಯಮಿ ಸಾಧು ಸಾಲ್ಯಾನ್, ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ವೇದಿಕೆಯ ಕಾರ್ಯದರ್ಶಿ ಸುಧಾಕರ್ ಕರ್ಕೇರ, ಕೋಶಾಧಿಕಾರಿ ವೇದವ್ಯಾಸ ಬಂಗೇರ, ಪೂರ್ಣಿಮಾ ಎಂ ಕರ್ಕೇರ, ಶಾಲಾ ವಿದ್ಯಾರ್ಥಿ ನಾಯಕ ಚೇತನ್ ಬಿ ಪೂಜಾರಿ, ಅಶೋಕ್ ಸುವರ್ಣ, ಅಶ್ವತ್ ಕರ್ಕೇರ, ಸತೀಶ್ ಸಾಲ್ಯಾನ್, ರವಿ ಕುಂದರ್, ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ನವ್ಯ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಅನುಪಮಾ ಮತ್ತು ಶಿಕ್ಷಕ ಸಂತೋಷ್ ನಿರೂಪಿಸಿದರು. ಉಪ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಶೆಟ್ಟಿ ವಂದಿಸಿದರು.