ಉಚ್ಚಿಲ: ರಸ್ತೆ ದಾಟುತ್ತಿದ್ದ ಯುವಕನಿಗೆ ಬಸ್ಸು ಡಿಕ್ಕಿ, ಗಂಭೀರ (Uchila : A young manwho was crossing the road was hit by a bus, seriously)
ಉಚ್ಚಿಲ: ರಸ್ತೆ ದಾಟುತ್ತಿದ್ದ ಯುವಕನಿಗೆ ಬಸ್ಸು ಡಿಕ್ಕಿ, ಗಂಭೀರ
(Uchila) ಉಚ್ಚಿಲ : ರಸ್ತೆ ದಾಟುತ್ತಿದ್ದ ಯುವಕನೋರ್ವನಿಗೆ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಆತ ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಉಚ್ಚಿಲ ಪೇಟೆಯಲ್ಲಿ ಘಟಿಸಿದೆ.
ಗಾಯಗೊಂಡ ಯುವಕನನ್ನು ಎರ್ಮಾಳು ಬಗ್ಗ ತೋಟದ ಬಳಿಯ ನಿವಾಸಿ ಪ್ರಶೀಲ್ ಎಲ್. ಸುವರ್ಣ ಎಂದು ಗುರುತಿಸಲಾಗಿದೆ.
ಈ ವೇಳೆ ತಕ್ಷಣ ಸ್ಪಂದಿಸಿದ ಉಚ್ಚಿಲದ ಯುವಕರ ತಂಡ ಯುವಕನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಮಾನವೀಯತೆ ಮರೆದಿದ್ದಾರೆ.
ಪ್ರಶೀಲ್ ಎಲ್. ಸುವರ್ಣ ಮಂಗಳೂರು ಕಡೆ ಹೋಗಲು ರಾಧಾ ಹೋಟೆಲ್ ಬಳಿ ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಬೆಂಗಳೂರಿನಿಂದ ಉಡುಪಿ ಕಡೆ ಹೊರಟಿದ್ದ ಐಡಿಯಲ್ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರಾದ ಜಲಾಲುದ್ದೀನ್ ಉಚ್ಚಿಲ, ಸಿರಾಜ್, ಸಾದಿಕ್, ಸ್ಥಳೀಯ ರಿಕ್ಷಾ ಚಾಲಕರು SDPI ಅಂಬ್ಯುಲೆನ್ಸ್ ಮೂಲಕ ಉಡುಪಿಯ ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ಸಾಗಿಸುವಲ್ಲಿ ಶ್ರಮಿಸಿದರು. ಯುವಕರ ಈ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.