# Tags
#ಕ್ರೀಡೆ #ಶಾಲಾ ಕಾಲೇಜು

ಉಚ್ಚಿಲ ಸರಸ್ವತಿ ಮಂದಿರ ಶಾಲಾ ವಾರ್ಷಿಕ ಕ್ರೀಡೋತ್ಸವ (Uchila Saraswathi Mandira School  annual sports festival)

ಉಚ್ಚಿಲ ಸರಸ್ವತಿ ಮಂದಿರ ಶಾಲಾ ವಾರ್ಷಿಕ ಕ್ರೀಡೋತ್ಸವ

 (Uchila) ಉಚ್ಚಿಲ : ಉಚ್ಚಿಲ ಸರಸ್ವತಿ ಮಂದಿರ ಶಾಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟ ಶನಿವಾರ ಜರಗಿತು.

 ಕ್ರೀಡಾಕೂಟವನ್ನು ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನರವರು ಕ್ರೀಡಾ ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

 ಅವರು ಈ ಸಂದರ್ಭ ಮಾತನಾಡಿ, ಕ್ರೀಡೆಯಲ್ಲಿ ಬಹುಮಾನ ಸಿಗುವುದೆಂದು ಭಾಗವಹಿಸದೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ. ಸೋಲು, ಗೆಲುವು ಎರಡು ನಾಣ್ಯದ ಮುಖದಂತಿದೆ. ಕ್ರೀಡೆಗೆ ಗೌರವ ನೀಡಿ ಭಾಗವಹಿಸಿ ಎಂದರು.

ಪ್ರೌಡ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಆಶಾ ದಿನೇಶ್‌ರವರು ಕ್ರೀಡಾ ಧ್ವಜಾರೋಹಣ ಗೈದರು.

  ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಸಂಚಾಲಕ ಮೋಹನದಾಸ ಶೆಟ್ಟಿ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಕಲಾವತಿ, ಉಪಾಧ್ಯಕ್ಷೆ ಶ್ರೀಮತಿ ಆಚಾರ್ಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ವೈ, ದೈಹಿಕ ಶಿಕ್ಷಕ ಸುರೇಶ್ ಕುಲಾಲ್, ಶ್ರೀಧರ ಉಚ್ಚಿಲ, ಗ್ರಾಪಂ ಸದಸ್ಯರಾದ ಕಲಾ, ಮೋಹಿನಿ ಮತ್ತಿತರರು ಉಪಸ್ಥಿತರಿದ್ದರು.

 ಬಾಬುರಾಯ ಆಚಾರ್ಯ ಸ್ವಾಗತಿಸಿದರು. ಶಿಕ್ಷಕಇ ಮಮತಾ ನಿರೂಪಿಸಿದರು. ಸುರೇಶ್‌ ಕುಲಾಲ್‌ ವಂದಿಸಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2