# Tags
#CONGARTULATIONS

ಉಡುಪಿ ; ಗಿರಿಜಾ ಹೆಗ್ಡೆಯವರರಿಗೆ “ಶಿಕ್ಷಕ ರತ್ನ” ಪ್ರಶಸ್ತಿ (Udupi : Girija Hedge got “Shikshaka Rathna” Award)

ಉಡುಪಿ : ಗಿರಿಜಾ ಹೆಗ್ಡೆಯವರರಿಗೆ ಶಿಕ್ಷಕ ರತ್ನಪ್ರಶಸ್ತಿ

(Udupi) ಉಡುಪಿ: ಬಹುಮುಖ ವ್ಯಕ್ತಿತ್ವದ ಗಿರಿಜಾ ಹೆಗ್ಡೆಯವರು 2024ರ ವಿಶ್ವ ಹವ್ಯಕ ಸಮ್ಮೇಳನದಲ್ಲಿ “ಶಿಕ್ಷಕ ರತ್ನ“ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

  ಡಿಸೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಖ್ಯಾತ ಲೇಖಕಿ, ಶಿಕ್ಷಕಿ ಶ್ರೀಮತಿ ಗಿರಿಜಾ ಹೆಗ್ಡೆಯವರು “ಶಿಕ್ಷಕ ರತ್ನ“ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

 ಶ್ರೀಮತಿ ಗಿರಿಜಾ ಹೆಗ್ಡೆಯವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,ಶಿಕ್ಷಕಿಯಾಗಿ ಕಳೆದ 25 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ.

 ಗಿರಿಜಾ ಹೆಗ್ಡೆಯವರು ಎಂಎ. (ಅರ್ಥಶಾಸ್ತ್ರ), ಎಂ.ಫಿಲ್ (ಉತ್ತರ ಕನ್ನಡ  ಕೈಗಾರಿಕೆಗಳ ಪ್ರಗತಿ), ಎಂ.ಬಿ.ಎ. (ಹೆಚ್ಆರ್), ಬಿ. ಎಡ್. ಸ್ಲೆಟ್ ಪರೀಕ್ಷೆ ಪಾಸಾಗಿರುತ್ತಾರೆ. ನಿಮ್ಹಾನ್ಸ್ ಕೊಡಮಾಡುವ ಒಂದು ವಾರದ  ಜೀವನ ಕೌಶಲ್ಯ ತರಬೇತಿಯನ್ನೂ ಪಡೆದಿದ್ದಾರೆ.

ಹವ್ಯಾಸ ಕಥೆ, ಕವನ ರಚನೆ

 ಗಿರಿಜಾ ಹೆಗ್ಡೆಯವರ ಅನಾವರಣ ಕವನ ಸಂಕಲನಕ್ಕೆ   ಕಾರ್ನಾಡು ಸದಾಶಿವರಾವ್ ಸ್ಮಾರಕ ಪ್ರಶಸ್ತಿಲಭಿಸಿದೆ.  ಪ್ರಕಟಿಸಿದ ಕೃತಿಗಳು : ಅಗಸೆ ಬಾಗಿಲು- ಕವನ ಸಂಕಲನ,  ನತ್ತು- ಕಥಾ ಸಂಕಲನ. ಇವರ ಕಥೆಗೆ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ. ಕಥಾ ಮತ್ತು ಕವನ ಸಂಕಲನ ಪ್ರಶಸ್ತಿ ಜೊತೆಗೆ ಇವರ ಹಲವಾರು ಕಥೆ-ಕವನಗಳು ರಾಜ್ಯದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಾಜ್ಯ  ಜಿಲ್ಲಾ ತಾಲೂಕು ಮಟ್ಟದ ಕವನ ಗೋಷ್ಠಿಗಳಲ್ಲಿ ಕವನ ವಾಚಿಸಿದ್ದಾರೆ.

  ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಯಾಗಿ ಸಾಮಾಜಿಕ ಸೇವಾ ಘಟಕಗಳಲ್ಲಿ ವಿಧ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಮೆರೆದಿದ್ದಾರೆ.

 ಯೋಗದ ಮಹತ್ವ, ಅರ್ಹ ಸಮಾಜ ಸೇವಕರ ಸನ್ಮಾನ, ಸ್ವಚ್ಛತಾ ಅಭಿಯಾನ, ಬೇಟಿ ಬಚಾವೊ ಬೇಟಿ ಪಡಾವೋ, ವಿಶೇಷ ಚೇತನ ಮಕ್ಕಳ ಕಾಳಜಿಯ ಕುರಿತ ಅರಿವು ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ಮತ್ತು ಮಣಿಪಾಲ ಆಕಾಶವಾಣಿಯಲ್ಲಿ ಇವರ ಕಥೆ, ಕವನ ಬಿತ್ತರಗೊಂಡಿದೆ. ಸ್ಥಳೀಯ ಟಿವಿ ಚಾನಲ್‌ಗಳಲ್ಲಿ ಇವರ ಸಂರ್ದರ್ಶನ ಮೂಡಿಬಂದಿದೆ. ಅರ್ಥಶಾಸ್ತ್ರದ ಉಡುಪಿ ಜಿಲ್ಲಾ ಪರೀಕ್ಷಾ ಮಿತ್ರ ಕೈಪಿಡಿಯ ರಚನೆಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಅರ್ಥಶಾಸ್ತ್ರಕ್ಕೆ ಸಂಬಂದಿಸಿದ ಲೇಖನಗಳು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿದೆ.

  ಪ್ರಸ್ತುತ ಉಡುಪಿಯಲ್ಲಿ ಪತಿ ಮತ್ತು ಮಗನೊಂದಿಗೆ ನೆಲೆಸಿದ್ದು, ತಮಗೆ ಬಂದಿರುವ ಈ ಪ್ರಶಸ್ತಿಯನ್ನು ತನ್ನ ಎಲ್ಲಾ ವಿಧ್ಯಾರ್ಥಿಗಳಿಗೆ ಅರ್ಪಿಸಲಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2