ಉಡುಪಿ ತುಳುಕೂಟದ ವತಿಯಿಂದ 29ನೇ ವರ್ಷದ “ತುಳು ಭಾವಗೀತೆ ಸ್ಪರ್ಧೆ”
(Udupi Tulu Koota : 29th Tulu Bhavageetha Cometition)
ಉಡುಪಿ ತುಳುಕೂಟದ ವತಿಯಿಂದ 29ನೇ ವರ್ಷದ “ತುಳು ಭಾವಗೀತೆ ಸ್ಪರ್ಧೆ”
(Udupi) ತುಳುಕೂಟ ಉಡುಪಿ (ರಿ,) ವತಿಯಿಂದ ದಿ||ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ 29ನೇ ವರ್ಷದ “ತುಳು ಭಾವಗೀತೆ ಸ್ಪರ್ಧೆ” ಯ ಉದ್ಘಾಟನೆಯನ್ನು ಉಡುಪಿಯ ಹಿರಿಯ ವಕೀಲರಾದ ಎಂ. ಶಾಂತಾರಾಮ್ ಶೆಟ್ಟಿ ಯವರು ನೆರವೇರಿಸಿದರು.
ವೇದಿಕೆಯಲ್ಲಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಶ್ರೀಮತಿ ವೀಣಾ ಶೆಟ್ಟಿ, ಡಾ. ಭರತ್ ಕುಮಾರ್ ಪೊಲಿಪು, ಭುವನಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಕೋಶಾಧಿಕಾರಿ ಎಂ.ಜಿ. ಚೈತನ್ಯ ಹಾಗೂ ತುಳು ಭಾವಗೀತೆ ಸ್ಪರ್ಧೆಯ ಜಯರಾಂ ಮಣಿಪಾಲ್ ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಕೋಗಿಲೆ ಗಣೇಶ್ ಗಂಗೊಳ್ಳಿ ಗೌರವ ಡಾಕ್ಟರೇಟ್ ಪುರಸ್ಕೃತರು ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಶ್ರೀಮತಿ ಯಶೋಧಾ ಕೇಶವ್ ರವರು ನಿರೂಪಿಸಿದರು. ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು.