ಉಡುಪಿ ಫ್ರೆಂಡ್ಸ್ ಟ್ರೋಪಿ-2024 ಹಗ್ಗ ಜಗ್ಗಾಟ ಸ್ಪರ್ಧೆ (Udupi Friends Trophy -2024 Tug of War Compitition)
ಉಡುಪಿ ಫ್ರೆಂಡ್ಸ್ ಟ್ರೋಪಿ-2024 ಹಗ್ಗ ಜಗ್ಗಾಟ ಸ್ಪರ್ಧೆ
ಹಗ್ಗಜಗ್ಗಾಟ ಕ್ರೀಡಾಂಗಣಕ್ಕೆ ಮಾತ್ರಾ ಸೀಮಿತವಾಗಲಿ– ಶಾಸಕ ಗುರ್ಮೆ ಸುರೇಶ್ ಶೆಟ್ಟಿ
(Udupi) ಉಡುಪಿ: ಇಂದು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಉಳಿದಿರುವುದು ಕ್ರೀಡಾ ಕ್ಷೇತ್ರ ಮಾತ್ರಾ. ಹಗ್ಗ ಜಗ್ಗಾಟ ಸಂಸಾರ ಮತ್ತು ಸಮಾಜದಲ್ಲಿ ಉಂಟಾಗದೆ ಕೇವಲ ಕ್ರೀಡಾಂಗಣಕ್ಕೆ ಮಾತ್ರಾ ಸೀಮಿತವಾಗಲಿ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಉಡುಪಿ ಪ್ರೆಂಡ್ಸ್ ಮಹಿಳಾ ಹಗ್ಗ ಜಗ್ಗಾಟ ತಂಡ ಉಡುಪಿ ಇದರ ಪ್ರಥಮ ವರ್ಷದ ಅಂಗವಾಗಿ ಕೆಮ್ತೂರು ಸಾಧನಾ ಯುವಕ ಮಂಡಲ ಮತ್ತು ಸಾಧಾನಾ ಮಹಿಳಾ ಮಂಡಳಿದ ಬಳಿ ಕೆಮ್ತೂರು ಪಡುಮನೆ ಶ್ರೀಮತಿ ಪುಷ್ಪ ಮತ್ತು ಶ್ರೀ ಆದಪ್ಪ ಶೆಟ್ಟಿ ಮೈದಾನದಲ್ಲಿ ಜರಗಿದ “ಉಡುಪಿ ಫ್ರೆಂಡ್ಸ್ ಟ್ರೋಪಿ-2024” – ಹಗ್ಗ ಜಗ್ಗಾಟ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಂದ್ಯಾಟವನ್ನು ಉದ್ಘಾಟಿಸಿದ ಕೇಮಾರು ಸಾಂಧೀಪನಿ ಆಶ್ರಮದ ಶ್ರೀ ಈಶ ವಿಠಲ ಸ್ವಾಮೀಜಿ ಆಶೀರ್ವಚನ ನೀಡಿ, ಮಹಿಳೆಯರೇ ಸೇರಿಕೊಂಡು ಇಷ್ಟು ದೊಡ್ಡ ಪಂದ್ಯಾಟವನ್ನು ಆಯೋಜಿಸಿದ್ದು, ಈ ತಂಡ ಕ್ರೀಡೆಯೊಂದಿಗೆ ಸಮಾಜ ಸೇವೆಗೂ ಆಧ್ಯತೆ ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ. ಬಿ.ಎಚ್ ಶೆಟ್ಟಿ, ಸುಜ್ಲಾನ್ ಎಸ್‌ಇಝಡ್ ಸೀನಿಯರ್ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಶೆಟ್ಟಿ, ರಾಜ್ಯ ಮಟ್ಟದ ಕ್ರೀಡಾಪಟು ಪ್ರವೀಣ್ ಶೆಟ್ಟಿ ಬೆಳ್ಳಂಪಳ್ಳಿ, ನಿವೃತ್ತ ಶಿಕ್ಷಕ ಕೆ ಸುಂದರ ಶೆಟ್ಟಿ, ವಿನೋಧ ಸುಂದರ ಶೆಟ್ಟಿ, ಸಂಜೀವ ಶೆಟ್ಟಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಸಂಧ್ಯಾ ರಮೇಶ್, ತಂಡದ ಕೋಚ್ ಸತೀಶ್, ಅಗ್ನಿ ಶಾಮಕದಳ ಅಧಿಕಾರಿಗಳಾದ ದೇವರಾಜ್, ರವೀಂದ್ರ , ಸಾಧನಾ ಯುವಕ ಮಂಡಲದ ಅಧ್ಯಕ್ಷ ಪ್ರಥಮ್ ಶೆಟ್ಟಿ, ಸಾಧನಾ ಮಹಿಳಾ ಮಂಡಲದ ಅಧ್ಯಕ್ಷೆ ರಂಜಿತಾ ಶೆಟ್ಟಿ, ತಂಡದ ನಾಯಕಿ ರೂಪಾ ಶೆಟ್ಟಿ, ಗ್ರಾ.ಪ. ಸದಸ್ಯರಾದ ರಂಜಿತಾ ಸುವರ್ಣ, ಆಶೀಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಂಗಭೂಮಿ ನಟ ಪ್ರಥಮ್ ಶೆಟ್ಟಿ, ಅಗ್ನಿಶಾಮಕ ದಳದ ಅಂತರಾಷ್ಟ್ರೀಯ ಕ್ರೀಡಾಪಟು ಅಶ್ವಿನ್ ಸನಿಲ್, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಸ್ಮಶಾನ ನಿರ್ವಾಹಕಿ ವನಜಾ ಪೂಜಾರ್ತಿ ಹಾಗೂ ತಂಡಗಳ ಕೋಚ್‌ಗಳನ್ನು ಸನ್ಮಾನಿಸಲಾಯಿತು.
ಉಡುಪಿ ಪ್ರೆಂಡ್ಸ್ ಮಹಿಳಾ ಹಗ್ಗಜಗ್ಗಾಟ ತಂಡದ ನಾಯಕಿ ರೂಪಾ ವಿ. ಶೆಟ್ಟಿ ಸ್ವಾಗತಿಸಿದರು. ನಿಕ್ಷಿತಾ ಶೆಟ್ಟಿ ವರದಿ ವಾಚಿಸಿದರು. ಶ್ರೀನಿತ್ ಶೆಟ್ಟಿ ಮೂಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.