# Tags
#CONGARTULATIONS

ಉಡುಪಿ: ಸಹಕಾರ ರತ್ನ ಕೆ. ನಾರಾಯಣ ಬಲ್ಲಾಳ್ ರವರಿಗೆ ನಾಗರಿಕ ಸನ್ಮಾನ (Udupi : Civilion honor to Sahakara Rathna awardee K Narayana ballal)

ಉಡುಪಿ: ಸಹಕಾರ ರತ್ನ ಕೆ. ನಾರಾಯಣ ಬಲ್ಲಾಳ್ ರವರಿಗೆ ನಾಗರಿಕ ಸನ್ಮಾನ 

(Udupi) ಉಡುಪಿ : ಸಹಕಾರ ರತ್ನ ಕೆ. ನಾರಾಯಣ ಬಲ್ಲಾಳ್ ಅಭಿನಂದನಾ ಸಮಿತಿಯ ವತಿಯಿಂದ ಸಹಕಾರ ರತ್ನ ಪುರಸ್ಕ್ರತರಾದ  ಕೆ. ನಾರಾಯಣ ಬಲ್ಲಾಳ್‌ರವರಿಗೆ ಊರ ನಾಗರಿಕರ ಪರವಾಗಿ ಅಭಿನಂದನಾ ಸಮಾರಂಭವು ಡಿ. 21ರ ಶನಿವಾರ ಸಂಜೆ 6.00 ಗಂಟೆಗೆ ಕೊಡವೂರು ಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಸಮಾರಂಭದ ಉದ್ಘಾಟನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಉದ್ಯಮಿ ಸಾಧು ಸಾಲ್ಯಾನ್  ವಹಿಸಲಿದ್ದಾರೆ.

  ಅತಿಥಿಗಳಾಗಿ ಉಡುಪಿ ಶಾಸಕ  ಯಶಪಾಲ್‌ ಸುವರ್ಣ, ಹಿರಿಯ ಸಹಕಾರಿ ಜಯಕರ ಶೆಟ್ಟಿ ಇಂದ್ರಾಳಿ, ಕೆ. ರವಿರಾಜ ಹೆಗ್ಡೆ, ಅಶೋಕ್ ಕುಮಾರ್ ಕೊಡವೂರು, ನಾರಾಯಣ ಬಲ್ಲಾಳ್, ಮೋಹನ ಉಪಾಧ್ಯ, ಮಾನಸಿ ಸುಧೀರ್, ನಗರ ಸಭಾ ಸದಸ್ಯ ವಿಜಯ್ ಕೊಡವೂರು ಭಾಗವಹಿಸಲಿದ್ದಾರೆ.

ಪೂರ್ಣಿಮಾ ಜನಾರ್ದನ್ ಅಭಿನಂದನಾ ಭಾಷಣ ಮಾಡಲಿದ್ದಾರೆ

ಪ್ರಾರಂಭದಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿ ಕೊಡವೂರು ಶಾಲಾ ವಠಾರಕ್ಕೆ ಮೆರಣಿಗೆಯ ಮೂಲಕ ಕರೆತರಲಾಗುವುದು.

 ಅಭಿನಂದನಾ ಕಾರ್ಯಕ್ರಮದ ಬಳಿಕ ಸಂಜೆ 7ಗಂಟೆಗೆ ಕಾಪು ರಂಗತರoಗ ಕಲಾವಿದರಿಂದ ತುಳು ಸಾಮಾಜಿಕ ತುಳು ನಾಟಕ – ಕುಟ್ಯಣ್ಣನ ಕುಟುಂಬ ನಡೆಯಲಿದೆ. ಎಂದು  ಅಭಿನಂದನಾ ಸಮಿತಿಯ ಕಾರ್ಯದರ್ಶಿ ಜನಾರ್ದನ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2