# Tags
#ಅಪಘಾತ

ಉಡುಪಿ, ಹೂಡೆಯಲ್ಲಿ ತೆಂಗಿನ ಕಾಯಿ ಕತ್ತ ಸಾಗಿಸುತ್ತಿದ್ದ ಗೂಡ್ಸ್ ವಾಹನಕ್ಕೆ ಬೆಂಕಿ : ತಪ್ಪಿದ ಭಾರೀ ದುರಂತ (Udupi : Fire in Goods tempo)

ಉಡುಪಿ, ಹೂಡೆಯಲ್ಲಿ ತೆಂಗಿನ ಕಾಯಿ ಕತ್ತ ಸಾಗಿಸುತ್ತಿದ್ದ ಗೂಡ್ಸ್ ವಾಹನಕ್ಕೆ ಬೆಂಕಿ : ತಪ್ಪಿದ ಭಾರೀ ದುರಂತ

(Udupi) ಉಡುಪಿ, ಹೂಡೆ: ತೆಂಗಿನ ಕಾಯಿ ಕತ್ತ ಸಾಗಿಸುತ್ತಿದ್ದ ವಾಹನಕ್ಕೆ ತಡರಾತ್ರಿ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಸಂಭವಿಸಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.

 ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಘಟನೆ ನಡೆದಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ‌.

 ತಡರಾತ್ರಿ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಕ್ಕದಲ್ಲೇ ವಸತಿ, ಹೊಟೇಲ್, ಕೆಫೆಯಿದ್ದು ಬೆಂಕಿ ವ್ಯಾಪಿಸಿದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಸೂಕ್ತ ಸಮಯದಲ್ಲಿ ಅಗ್ನಿ ಶಾಮಕ ದಳದ ವಾಹನ ಬಂದು ನಂದಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2