# Tags
#ಅಪರಾಧ

ಉದ್ಯಾವರ : ಪಡುಕೆರೆ ಪಾಪನಾಷಿನಿ‌ ನದಿಯಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸ್‌ ಸೂಚನೆ (Udyavara : Unidetified body found in Padukare Papanashini river, Police notice for Identification)

ಉದ್ಯಾವರ : ಪಡುಕೆರೆ ಪಾಪನಾಷಿನಿನದಿಯಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸ್‌ ಸೂಚನೆ

ಉದ್ಯಾವರ: ಉದ್ಯಾವರ ಗ್ರಾಮದ ಕಾನಕೊಡ ಪಡುಕೆರೆ ಪಾಪನಾಷಿನಿ‌ ನದಿಯ ಪಶ್ಚಿಮ ಬದಿಯಲ್ಲಿ 35 ರಿಂದ 40 ವರ್ಷದ ಗಂಡಸಿನ ಮೃತದೇಹ ಪತ್ತೆ ಆಗಿದ್ದು, ಗುರುತು ಪತ್ತೆಗಾಗಿ ಕಾಪು ಪೊಲೀಸರು ಮನವಿ ಮಾಡಿದ್ದಾರೆ.   

ಗುರುವಾರ 35 ರಿಂದ 40 ವರ್ಷದ ಗುರುತು ಪತ್ತೆ ಆಗದ ಗಂಡಸ್ಸಿನ ಶವವು ಕಂಡು ಬಂದಿದೆ.

ಮೃತ ವ್ಯಕ್ತಿ ಆಕಾಶ ನೀಲಿ ಬಣ್ಣದ ಟೀಶರ್ಟ್, ಕಡು ನೀಲಿ ಬಣ್ಣದ ಬರ್ಮುಡಾ ಚಡ್ಡಿ, ಕೆಂಪು ಬಣ್ಣದ ಎಡಗೈಯಲ್ಲಿ ಕಪ್ಪು ರಬ್ಬರ್ ಬ್ಯಾಂಡ್ ಇದ್ದು, ಬಲಗೈಯಲ್ಲಿ ಕೆಂಪು ಬಣ್ಣದ ನೂಲು ಕಟ್ಟಿರುತ್ತಾನೆ.  ಕೆಂಪು ಬಣ್ಣದ ಒಳ ಚಡ್ಡಿ ಧರಿಸಿರುತ್ತಾನೆ. ನೋಡಲು ಸಿದ್ದಿ ಜನಾಂಗ ರೀತಿ ಕಂಡು ಬರುತ್ತಿದೆ ಎಂದು  ಕಾಪು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಸಮಾಜ ಸೇವಕ ಸೂರಿ ಶೆಟ್ಟಿ, ಮತ್ತು ನಾಗರಾಜ್‌ ಸಹಕರಿಸಿದರು.

ಗುರುತು ಪರಿಚಯ ಇದ್ದವರು ಕಾಪು ಠಾಣೆಯ 2551033 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿಕೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2