ಉದ್ಯಾವರ: ಸ್ಕೂಟಿ ಸ್ಕಿಡ್, ಸವಾರ ಸಾವು (Udyavara Scooty skids, rider dies)
ಉದ್ಯಾವರ: ಸ್ಕೂಟಿ ಸ್ಕಿಡ್, ಸವಾರ ಸಾವು
(Kaup) ಕಾಪು : ಕಾಪು ಠಾಣಾ ವ್ಯಾಪ್ತಿಯ ಉದ್ಯಾವರ ರಾ.ಹೆ 66 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾಪುವಿನ ಟೈಲರ್ ಬಾಬು(65) ಎಂಬವರು ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿರುವ ಸಹೋದರನ ಆರೈಕೆಯಲ್ಲಿದ್ದ ಬಾಬುರವರು, ಕಾಪುವಿಗೆ ಮರಳುತ್ತಿದ್ದಾಗ ಉದ್ಯಾವರ ಕಾವೇರಿ ಪೋರ್ಡ್ ಶೋರೂಂನ ಎದುರು ಸ್ಕೂಟಿಯು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ಬಾಬುರವರ ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಅವರು ಮೃತಪಟ್ಟಿರುತ್ತಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.