ಎರ್ಮಾಳು: ಮೀನಿನ ಟೆಂಪೋ ವಿನ ಟೈಯರ್ ಬ್ಲಾಸ್ಟ್, ಪಲ್ಟಿ, ಇಬ್ಬರಿಗೆ ಗಾಯ(Yermal : Tempo tyre blast, two injured)
ಎರ್ಮಾಳು: ಮೀನಿನ ಟೆಂಪೋ ವಿನ ಟೈಯರ್ ಬ್ಲಾಸ್ಟ್, ಪಲ್ಟಿ, ಇಬ್ಬರಿಗೆ ಗಾಯ
(Yermal) ಎರ್ಮಾಳು: ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಬುಧಿಯಾ ಪೆಟ್ರೋಲ್ ಪಂಪ್ ಎದುರು ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಮೀನಿನ ಟೆಂಪೋ ವೊಂದರ ಟೈಯರ್ ಒಡೆದ ಪರಿಣಾಮ ಟೆಂಪೋ ಹೆದ್ದಾರಿಯಲ್ಲಿ ಮಗುಚಿ ಬಿದ್ದು, ಚಾಲಕ ಹಾಗೂ ನಿರ್ವಾಹಕ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮಲ್ಪೆಯಿಂದ ಮೀನನ್ನು ಹೇರಿಕೊಂಡು ಸಾಗುತ್ತಿದ್ದ ಟೆಂಪೋವಿನ ಟೈಯರ್ ಏಕಾಏಕಿ ಸ್ಪೋಟಗೊಂಡಿದೆ. ಈ ಸಂದರ್ಭ ಟೆಂಪೋ ಎರಡು ಸುತ್ತು ತಿರುಗಿ ಹೆದ್‌ಆರಿಯಲ್ಲಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಬೇರೆ ವಾಹನಗಳು ಇಲ್ಲದಿದ್ದುದರಿಂದ ಸಂಭಾವ್ಯ ಅವಘಡ ತಪ್ಪಿದೆ.
ಟೆಂಪೋದಲ್ಲಿ ಚಾಲಕ ಮತ್ತು ನಿರ್ವಾಹಕ ಸಿಕ್ಕಿ ಬಿದ್ದಿದ್ದು, ಅವರನ್ನು ಸ್ಥಳೀಯರು ರಕ್ಷಿಸಿ ಉಚ್ಚಿಲದ ಎಸ್ ಡಿ ಪಿ ಐ ಅಂಬುಲೆನ್ಸ್‌ನಲ್ಲಿ ಪಡುಬಿದ್ರಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.