ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ನಲ್ವತ್ತನೇ ವಾರ್ಷಿಕೋತ್ಸವ (Yermal Srinidhi Mahila Mandala ೪೦th Anniversary)
ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ನಲ್ವತ್ತನೇ ವಾರ್ಷಿಕೋತ್ಸವ
(Yermal) ಎರ್ಮಾಳು : ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲ ಇದರ ನಲ್ವತ್ತನೇ ವಾರ್ಷಿಕೋತ್ಸವ ಜನಾರ್ಧನ ದೇವಸ್ಥಾನದ ಆವರಣದಲ್ಲಿ ಜರಗಿತು.
ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಶೀಲಾ ಕೆ ಶೆಟ್ಟಿ ವಹಿಸಿದ್ದರು.
ಈ ಸಂದರ್ಭ ಡಾ. ಸ್ಪೂರ್ತಿ ಶೆಟ್ಟಿ , ಸುಲತ ಕಾಮತ್ ಕಟಪಾಡಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಅಶಕ್ತರಿಗೆ ಧನ ಸಹಾಯ, ಆಸು ಪಾಸಿನ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿರಿಸಲಾಯಿತು.
ಮುಖ್ಯ ಅತಿಥಿ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ದೇವಳದ ಅನುವಂಶೀಯ ಮೊಸ್ತೇಸರ ಅಶೋಕ್ ರಾಜ್, ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ಡಾ. ಸ್ಪೂರ್ತಿ ಪಿ. ಶೆಟ್ಟಿ, ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ಶೆಟ್ಟಿ ಸ್ವಾಗತಿಸಿದರು.
ವಾರ್ಷಿಕ ವರದಿಯನ್ನು ಅಮಣಿ ಕುಂದರ್ ವಾಚಿಸಿದರು. ಮಾಜಿ ಅಧ್ಯಕ್ಷೇ ಜ್ಯೋತಿ ಎಸ್ ಶೆಟ್ಟಿ ನಿರೂಪಿಸಿದರು. ಅಮೃತ ಕಲಾ ಶೆಟ್ಟಿ ವಂದಿಸಿದರು.
ಮಹಿಳಾ ಮಂಡಲದ ವತಿಯಿಂದ ಮನೋರಂಜನಾ ಕಾರ್ಯಕ್ರಮ ನೆರವೇರಿತು.
ಕಾಪು ರಂಗ ತರಂಗ ಕಲಾವಿದರಿಂದ ಕುಟ್ಯಣ್ಣ ನ ಕುಟುಂಬ ಎಂಬ ಹಾಸ್ಯಮಯ ತುಳುನಾಟಕ ಪ್ರದರ್ಶನಗೊಂಡಿತು.