ಎಲ್ಲೂರು : ಮನೆ ಅಂಗಳದಿಂದ ನಾಯಿ ಹೊತ್ತೊಯ್ದ ಚಿರತೆ : ದೃಶ್ಯ ಸಿಸಿ ಕೆಮೆರಾದಲ್ಲಿ ಸೆರೆ (Yelluru : Leopard carrying dog from the house yard : Scene cought by CC Cemera)
ಎಲ್ಲೂರು : ಮನೆ ಅಂಗಳದಿಂದ ನಾಯಿ ಹೊತ್ತೊಯ್ದ ಚಿರತೆ : ದೃಶ್ಯ ಸಿಸಿ ಕೆಮೆರಾದಲ್ಲಿ ಸೆರೆ
(Yelluru) ಎಲ್ಲೂರು: ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿಯೂರಿನಲ್ಲಿ ಗುರುವಾರ ರಾತ್ರಿ ಮನೆಯಂಗಳಕ್ಕೆ ಬಂದ ಚಿರತೆಯೊಂದು ಮನೆ ನಾಯಿಯನ್ನು ಹೊತ್ತೊಯ್ದ ಘಟನೆ ಘಟಿಸಿದೆ.
ಪಣಿಯೂರಿನ ಮುರಳಿ ಶೆಟ್ಟಿ ಅವರು ಎಲ್ಲೂರಿನ ಮಾಣಿಯೂರಿನಲ್ಲಿ ನೂತನ ಮನೆ ಕಟ್ಟಿಸಿದ್ದರು. ಗುರವಾರ ರಾತ್ರಿ 9.30 ರ ಸುಮಾರಿಗೆ ಮನೆ ನಾಯಿ ಜೋರಾಗಿ ಬೊಗಳುತ್ತಿತ್ತು. ಹೊರ ಬಂದು ನೋಡಿದಾಗ ಏನೂ ಕಂಡಿಲ್ಲ. ಮತ್ತೆ ಬೊಗಳ ಹತ್ತಿದ ನಾಯಿ ಏಕಾಏಕಿ ಶಬ್ದ ನಿಲ್ಲಿಸಿತ್ತು. ಇದರಿಂದ ಸಂಶಯಗೊಂಡ ಮನೆಯವರು ಸಿಸಿ ಟೀವಿ ದೃಶ್ಯ ಪರಿಶೀಲಿಸಿದಾಗ ಮನೆಯಂಗಳಕ್ಕೆ ಚಿರತೆ ಆಗಮಿಸಿದ ಆತಂಕಕಾರಿ ಸಂಗತಿ ತಿಳಿದು ಬಂದಿದೆ.
ಈ ಪರಿಸರಲ್ಲಿ ಚಿರತೆ ಕಂಡು ಬಂದಿದ್ದು, ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಮುರಳಿ ಶೆಟ್ಟಿಯವರು ಆಗ್ರಹಿಸಿದ್ದಾರೆ.