# Tags
#ಅಪಘಾತ

ಎಲ್ಲೂರು : ಸಿಡಿಲಾಘಾತಕ್ಕೆ ದನ ಬಲಿ, ವಿದ್ಯುತ್‌ ಉಪಕರಣ ಹಾನಿ (Yelluru : Cattle killed in lightning strike, house damaged)

ಎಲ್ಲೂರು : ಸಿಡಿಲಾಘಾತಕ್ಕೆ ದನ ಬಲಿ, ವಿದ್ಯುತ್‌ ಉಪಕರಣ ಹಾನಿ

(Yelluru)ಎಲ್ಲೂರು : ಫೆಂಗಲ್ ಚಂಡಮಾರುತದ ಪರಿಣಾಮ ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಸಿಡಿಲಿಗೆ ದನದ ಹಟ್ಟಿಗೆ ಸಿಡಿಲು ಬಡಿದು ದನವೊಂದು ಸಾವನ್ನಪ್ಪಿ, ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಉಂಟಾದ ಘಟನೆ ಕಾಪು ತಾಲೂಕಿನ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

 ಎಲ್ಲೂರು ಜೋಗಿ ತೋಟದ ಶೇಖರ್ ಪೂಜಾರಿಯವರ ದನದ ಹಟ್ಟಿಗೆ ಸಿಡಿಲು ಬಡಿದಿದ್ದು, ಇದರ ಪರಿಣಾಮ ದನ ಸಾವನ್ನಪ್ಪಿದೆ. ಹಾಲು ಕರೆಯುವ ದನ ಇದಾಗಿದ್ದು ಸುಮಾರು ೨೫ ಸಾವಿರ ರೂ ನಷ್ಠ ಉಂಟಾಗಿದೆ. ಜೊತೆಗೆ ಮನೆಯ ವಿದ್ಯುತ್ ಉಪಕರಣಗಳು ಸಿಡಿಲಿಗೆ ಹಾನಿಯಾಗಿದೆ.

 ಎಲ್ಲೂರು ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಿಗರು ಘಟನಾ ಸ್ಥಳಕ್ಕೆ ಪರಿಶೀಲನೆ ನಡೆಸಿ, ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2