# Tags
#health

ಔಷಧೀಯ ಗುಣವುಳ್ಳ ಕಾಡುಪೀರೆ ನಮ್ಮ ಆರೋಗ್ಯ ರಕ್ಷಕ (spiny gourd is our health guard with medicinal)   

ಔಷಧೀಯ ಗುಣವುಳ್ಳ ಕಾಡುಪೀರೆ ನಮ್ಮ ಆರೋಗ್ಯ ರಕ್ಷಕ   

 ಚಿತ್ರ, ಬರಹ: ಕುಮಾರ್ ಪೆರ್ನಾಜೆ, ಪುತ್ತೂರು

(Putturu) ಪುತ್ತೂರು: ಕಾಡು ಪೀರೆ, ಕಾಟು ಪೀರೆ ಎಂದೆಲ್ಲಾ ಹೆಸರಿನಿಂದ ಕರೆಯುವ ಈ ತರಕಾರಿ ಔಷಧೀಯ ಗುಣವುಳ್ಳದ್ದಾಗಿದ್ದು, ಜನರು ಇದನ್ನು ಬೆಳೆಯಲು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ.

 ಕಾಡಿನಲ್ಲಿ ಬೆಳೆಯುತ್ತಿದ್ದ ಈ ತರಕಾರಿ, ಮಡಾ ಹಾಗಲಕಾಯಿ ಹೈಬ್ರಿಡ್ ತರಕಾರಿ ಇದೀಗ ಮಾರುಕಟ್ಟೆಗೆ ಬಂದಿದೆ. ಈ ಬಳ್ಳಿ ತರಕಾರಿಯನ್ನು ಇಂಗ್ಲೀಷ್ ನಲ್ಲಿ spiny gourd ಎಂದು ಕರೆಯುತ್ತಾರೆ.  ಇದರ ಇನ್ನೊಂದು ಹೆಸರು  kantola(ಕಂಟೋಲ), ಎಂದು ಹೇಳಲಾಗುತ್ತಿದೆ. ಬಾಂಗ್ಲಾದಲ್ಲಿ ಹೆಚ್ಚಾಗಿ ಆಗುತ್ತಿರುವ ಇದಕ್ಕೆ ಅಲ್ಲಿ ಕಾಕ್ರೊಲ್ ಎಂದೂ ಕರೆಯುತ್ತಾರೆ.

ಕಾಡು ಪೀರೆ, ಕಾಟು ಪೀರೆಯಲ್ಲಿ ಔಷದೀಯ ಗುಣಗಳು ಹೇರಳವಾಗಿದೆ. ವಿಟಮಿನ್ ಸಿ ದೇಹವನ್ನು ಸೋಂಕುಗಳಿಂದ ದೂರವಿಡುತ್ತದೆ. ಫೈಬರ್, ವಿಟಮಿನ್, ಖನಿಜ ಮತ್ತು ಸಮೃದ್ಧವಾದ ಪೌಷ್ಟಿಕ ಪೋಷಕಾಂಶಗಳಿಂದ ಇದು ಕೂಡಿದೆ.

ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ತಿನ್ನಲು ರುಚಿಯಾದ ಇದರಿಂದ ಪಲ್ಯ, ಸಾಂಬಾರ್, ಮೇಲಾರ (ಹುಳಿ) ಮೆಣಸಿನ ಕಾಯಿ, ಎಳೆಯದಾದರೆ ಪೋಡಿ, ಬಜ್ಜಿ, ಮಾಡಲಾಗುತ್ತದೆ.

     ಕಾಡಿ ಪೀರೆ ಮಡಿಕೇರಿಯಲ್ಲಿ ಹೆಚ್ಚಾಗಿ ಇದೀಗ ಕಂಡು ಬರುತ್ತದೆ. ಘಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಗಂಡು – ಹೆಣ್ಣು ಹೂವು ಬೇರೆ ಬೇರೆ ಬಳ್ಳಿಯಲ್ಲಿ ಇರುತ್ತದೆ. ಇದು ಗಡ್ಡೆಗಳಿಂದಲೂ ಮತ್ತು ಗಿಡಗಳಿಂದಲೂ ಮೊಳಕೆ  ಬರುತ್ತವೆ. ಸಾಮಾನ್ಯವಾಗಿ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್  ಈ ಮೂರು ತಿಂಗಳಿನಲ್ಲಿ ಈ ತರಕಾರಿಗಳು ಆಗುತ್ತವೆ. ನಂತರ ಬಳ್ಳಿ ಒಣಗಿ ಮತ್ತೆ ಮಳೆಗಾಲದಲ್ಲಿ ಗಡ್ಡೆಯಿಂದ ಗಿಡಗಳು ಮೊಳಕೆ ಒಡೆದು ಬಳ್ಳಿಯಾಗಿ ಮಾರ್ಪಾಡುಗೊಂಡು ಚಪ್ಪರದಲ್ಲಿ ಉತ್ತಮ ಫಸಲು ನೀಡುತ್ತದೆ.

ಹಿರಿಯರು ಕಾಡು ಹಾಗಲ, ಕಾಡುಪಿರೆಯನ್ನು ಆಯುರ್ವೇದ ಔಷಧವಾಗಿ ಬಳಸುತ್ತಾ ಬಂದಿದ್ದಾರೆ. ತನ್ನೊಳಗೆ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ಕಾಡುಪಿರೆ ,   ಅನೇಕ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಜೊತೆ ಬೀಜವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

 ಕಾಡು ಹೀರೆ ನಾಗರ ಪಂಚಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಚೌತಿ, ನವರಾತ್ರಿ, ದೀಪಾವಳಿ ಹೀಗೆ ಹಬ್ಬಗಳ ಸಂದರ್ಭ ತರಕಾರಿಯಾಗಿ ಉಪಯೋಗಕ್ಕೆ ಸಿಗುತ್ತದೆ. ಈಗ  ಮಾರುಕಟ್ಟೆಯಲ್ಲಿ ಇದರ ಬೆಲೆ ಕಿಲೋ ಒಂದಕ್ಕೆ 250ರೂ.  ಸಿಗುತ್ತಿದ್ದು, ಕೃಷಿಕರಿಗೆ ಉತ್ತಮ ಲಾಭದಾಯಕ ತರಕಾರಿ ಯಾಗಿದೆ.

 ಮಡಾ ಹಾಗಲಕಾಯಿಯನ್ನು ಬಂಟ್ವಾಳ ತಾಲೂಕಿನ ಮುಡಿಪು ಸುಬ್ರಮಣ್ಯ ಭಟ್ ಅವರು ಬೆಳೆಸಿದ್ದು, ಪ್ರಾರಂಭದಲ್ಲಿ ಮಡಿಕೇರಿಯಿಂದ ಇದರ ಗಡ್ಡೆಯನ್ನು ತಂದು ನೆಟ್ಟು ಅವರು ಬೆಳೆಸಿದ್ದಾರೆ

ಸಗಣಿ ನೀರು ಹಾಕಿದಾಗ ಬಳ್ಳಿ ಚೆನ್ನಾಗಿ ಬೆಳೆದು ಹಬ್ಬುತ್ತದೆ.  ಗಿಡ ತುಂಬಾ ಕಾಯಿಗಳು ಬೆಳೆದು ನೋಡಲೂ ಆಕರ್ಷಣೀಯವಾಗಿದೆ.

ಕಾಡುಪಿರೆಯಲ್ಲಿ ಮೇಲ್ ಫೀಮೇಲ್ ಎಂದು ಬೇರೆ ಬೇರೆ ಹೂಗಳು ಇಲ್ಲ ಒಂದೇ ಬಳ್ಳಿಯಲ್ಲಿ ಆಗುತ್ತವೆ. ಹೂವಿನ ದಳಗಳನ್ನು ತೆಗೆದು ಹಿಂದುಗಡೆ ಕಾಯಿಗಳು ಇರುವ ಕೇಸರಿ ಭಾಗಕ್ಕೆ ಪರಾಗ ಸ್ಪರ್ಶ ಮಾಡಬೇಕು. ಒಮ್ಮೆ ಪರಾಗಸ್ಪರ್ಶ ಆಯಿತೆಂದರೆ, 15 ದಿವಸಗಳಲ್ಲಿ ಕಾಯಿ ಕೊಯ್ಲಿಗೆ  ಬರುತ್ತದೆ.  

ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕುಮಾರ್ ಪೆರ್ನಾಜೆ ಪುತ್ತೂರು ಇವರ ಮೋ: 9480240643 ಸಂಖ್ಯೆಯನ್ನು ಸಂಪರ್ಕಿಸಿ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2