ಕಟಪಾಡಿ : ಅಪರಿಚಿತ ಗಂಡಸಿನ ಮೃತದೇಹ ಪತ್ತೆ (Un identified Dead body Found at Katapadi)
ಕಟಪಾಡಿ : ಅಪರಿಚಿತ ಗಂಡಸಿನ ಮೃತದೇಹ ಪತ್ತೆ
(Katapadi) ಕಟಪಾಡಿ : ಕಾಪು ಠಾಣಾ ವ್ಯಾಪ್ತಿಯ ಏಣಗುಡ್ಡೆ ಗ್ರಾಮದ ಪಾಪನಾಶಿನಿ ಹೊಳೆಯಲ್ಲಿ ಓರ್ವ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.
ಫಾರೆಸ್ಟ್ ಗೇಟ್ ಹಿಗ್ಗಿನ್ ರೋಡ್ರಿಗಸ್ ರವರ ರಿವರ್ ವಿವ್ ಮನೆಯ ಅನತಿ ದೂರದಲ್ಲಿ ಪತ್ತೆಯಾಗಿದೆ.
ಮೃತದೇಹವನ್ನು ಸ್ಥಳೀಯರ ಸಹಕಾರದೊಂದಿಗೆ ದೋಣಿಯ ಸಹಾಯದಿಂದ ಏಣಗುಡ್ಡೆಯ ನೇವಿ ಎನ್.ಸಿ.ಸಿ ಬೋಟ್ ಮೂಲಕ ಮೇಲೆ ತರಲಾಯಿತು.
ಸುಮಾರು 40 ರಿಂದ 45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ಇದಾಗಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ.
ಮೃತದೇಹದ ಮೇಲೆ ಕಂದುಬಣ್ಣದ ಒಳಚಡ್ಡಿ ಮಾತ್ರ ಇದ್ದು, ಬೇರೆ ಯಾವುದೇ ಬಟ್ಟೆಗಳು ಇರಲಿಲ್ಲ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.