ಕಟೀಲು ಕ್ಷೇತ್ರಕ್ಕೆ ನಟ ಉಪೇಂದ್ರ ಭೇಟಿ, ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಮೆಚ್ಚುಗೆ (Actor Upendra Visit Kateelu Sri Durgaparameshwari Temple)
ಕಟೀಲು ಕ್ಷೇತ್ರಕ್ಕೆ ನಟ ಉಪೇಂದ್ರ ಭೇಟಿ, ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಮೆಚ್ಚುಗೆ
(Kateelu) ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ಉಪೇಂದ್ರ ಭೇಟಿ ನೀಡಿ, ದೇವರ ದರ್ಶನ ಪಡೆದು, ಅನ್ನದಾನಕ್ಕೆ ಕಾಣಿಕೆ ನೀಡಿದರು.
ಉಪ್ರೇಂದ್ರ ಅವರಿಗೆ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ದೇವರ ಶೇಷವಸ್ತ್ರ ಪ್ರಸಾದ ನೀಡಿದರು.
ಶ್ರೀಹರಿನಾರಾಯಣದಾಸ ಆಸ್ರಣ್ಣ ದೇಗುಲದ ಚಟುವಟಿಕೆ, ಶಿಕ್ಷಣಸಂಸ್ಥೆಗಳು, ಸ್ವಚ್ಛತೆಯ ವ್ಯವಸ್ಥೆ, ದೇವಸ್ಥಾನದಲ್ಲಿ ನೀಡುವ ಪ್ರಸಾದಕ್ಕೆ ಪ್ಲಾಸ್ಟಿಕ್ ಬಳಸದೆ ಇರುವ ಬಗ್ಗೆ ಮಾಹಿತಿ ನೀಡಿದರು.
ಆಸಕ್ತಿಯಿಂದ ಈ ಮಾಹಿತಿಗಳನ್ನು ಕೇಳಿಸಿಕೊಂಡ ಉಪೇಂದ್ರ ಕ್ಯಾಪ್ಸ್ ಫೌಂಡೇಷನ್ ನಡೆಸುತ್ತಿರುವ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಕ್ಷೇತ್ರಕ್ಕೆ ಬಂದ ಭಕ್ತರಿಗೆ ಬಟ್ಟೆ ಚೀಲಗಳನ್ನು ವಿತರಿಸಿದರು. ಈ ಅಭಿಯಾನವನ್ನು ಬೆಂಬಲಿಸುವುದಾಗಿ ಕ್ಯಾಪ್ಸ್ ಫೌಂಡೇಷನ್‌ನ ಮುಖ್ಯಸ್ಥ ಡಾ. ಚಂದ್ರಶೇಖರ ಶೆಟ್ಟಿಯವರಿಗೆ ಹೇಳಿದರು.
ಮಾತಾಡಿಸಲು, ಸೆಲ್ಫಿ ತೆಗೆಯಲು ಮುಗಿಬಿದ್ದ ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳಿಗೆ, ಅಭಿಮಾನಿಗಳೊಂದಿಗೆ ಖುಷಿಯಿಂದಲೇ ಸ್ಪಂದಿಸಿದ ಉಪೇಂದ್ರ ಅವರೊಂದಿಗೆ ಫೋಟೋ ತೆಗೆಸಿಕೊಂಡರು.
ತನ್ನ ಹೊಸ ಸಿನಿಮಾ ಯುಐ ಇದರ ಪ್ರಚಾರ ಕಟೀಲು ತಾಯಿಯ ದರ್ಶನ, ಪ್ರಾರ್ಥನೆಯ ಜೊತೆಗೇ ಆರಂಭಿಸಿದ್ದೇವೆ ಎಂದು ಉಪೇಂದ್ರ ಹೇಳಿಕೊಂಡರು. ಶ್ರೀಕಾಂತ್, ನವೀನ್ ಮುಂತಾದವರು ಉಪೇಂದ್ರ ಜೊತೆಗಿದ್ದರು.