ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ (Karamballi Zone Brahmana Samithi Anniversary, Tribute to achievers)
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ
(Udupi) ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ 18 ನೇ ವಾರ್ಷಿಕೋತ್ಸವವು ಕರಂಬಳ್ಳಿ ಶ್ರೀ ವೆಂಕಟ್‌ರಮಣ ದೇವಸ್ಥಾನದ ಶ್ರೀನಿವಾಸ ಸಭಾ ಭವನದಲ್ಲಿ ನೆರವೇರಿತು.
ಶ್ರೀ ದೇವರಿಗೆ ವಿಷ್ಣುಸಹಸ್ರನಾಮಾವಳಿ ಸಹಿತ ತುಳಸಿ ಅರ್ಚನೆ, ಮಹಾಸಭೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಸಮಿತಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .
ಮಹಾಸಭೆಯಲ್ಲಿ ಕೀಳಂಜೆ ಶ್ರೀ ಕೃಷ್ಣರಾಜ್ ಭಟ್ ಅವರನ್ನು 4 ನೇ ಅವಧಿಗೆ ಸಮಿತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ನಿಕಟ ಪೂರ್ವ ಶಾಸಕರಾದ ಕೆ ರಘುಪತಿ ಭಟ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಪ್ರರಾದ ಅಂಕಣಕಾರ, ಸಮಾಜ ಚಿಂತಕ ಜಲಂಚಾರು ರಘುಪತಿ ತಂತ್ರಿ, ಯಕ್ಷಗಾನ ಕಲಾ ಸೇವಕ ಉದಯ ಕುಮಾರ್ ಮಧ್ಯಸ್ತ, ರಾಷ್ಟ್ರ ಮಟ್ಟದ ಕ್ರೀಡಾ ಪಟು ಶ್ರೀಮತಿ ಜಯಾ ತಂತ್ರಿ ಕೆ ಪಾಕತಜ್ಞ ಮುಖ್ಯಪ್ರಾಣ ಉಪಾಧ್ಯಾಯರವರನ್ನು ಸನ್ಮಾನಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿದ್ಯಾನಿಧಿ ಅರ್ಪಣೆ, ವಿವಾಹದ ಸುವರ್ಣ ಮಹೋತ್ಸವ ಆಚರಿಸಿಕೊಂಡ ವಿಪ್ರ ದಂಪತಿಗಳಿಗೆ ಗೌರವಾರ್ಪಣೆ ಹಾಗೂ ವಿಪ್ರ ಗೋಪಾಲಕರನ್ನು ಸನ್ಮಾನಿಸಲಾಯಿತು.
ಉಡುಪಿ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಪ್ರೊಫೆಸರ್ ಷಣ್ಮುಖ ಹೆಬ್ಬಾರ್ ಶುಭಾಶಂಸನೆ ಗೈದರು .
ಉಡುಪಿ ಜಿಲ್ಲಾ ವಿಪ್ರ ಮಹಾಸಭಾದ ಅಧ್ಯಕ್ಷ ಸಂದೀಪ್ ಮಂಜ, ಅರ್ಚಕ ದಿವಾಕರ್ ಐತಾಳ್, ಸಮಿತಿಯ ಉಪಾಧ್ಯಕ್ಷ ರಂಗನಾಥ ಸಾಮಗ, ಕೋಶಾಧಿಕಾರಿ ಅಜಿತ್ ಬಿಜಾಪುರ್ ಉಪಸ್ಥಿತರಿದ್ದರು.
ಕ್ರೀಡಾ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ ಗುಂಡಿಬೈಲ್, ಚಂದ್ರಕಾಂತ್ ಕೆ ಎನ್, ಶ್ರೀಪತಿ ಭಟ್, ರಂಗನಾಥ ಸರಳಾಯ, ವೇದವ್ಯಾಸ ಆಚಾರ್, ಸುಧಾ ಭಟ್, ಕವಿತಾ ಆಚಾರ್, ವಸುಧಾ ಭಟ್ ಮತ್ತು ರಾಧಿಕಾ ಭಟ್ ಸಹಕರಿಸಿದರು .
ಪೆರಂಪಳ್ಳಿ ವಾಸುದೇವ ಭಟ್ ಮತ್ತು ಶ್ರೀನಿವಾಸ ಬಲ್ಲಾಳ್ ನಿರೂಪಿಸಿದರು. ಕಾರ್ಯದರ್ಶಿ ನಾಗರಾಜ್ ಭಟ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಯಶ್ರೀ ಬಾರಿತ್ತಾಯ ಮತ್ತು ಪ್ರಿಯಂವದಾ ನಿರ್ವಹಿಸಿದರು.