ಕಾಂತರ-1 ಚಿತ್ರದ ನೃತ್ಯ ಕಲಾವಿದರಿದ್ದ ವಾಹನ ಪಲ್ಟಿ- 6 ಮಂದಿಗೆ ಗಂಭೀರ ಗಾಯ
ಕಾಂತರ-1 ಚಿತ್ರದ ನೃತ್ಯ ಕಲಾವಿದರಿದ್ದ ವಾಹನ ಪಲ್ಟಿ- 6 ಮಂದಿಗೆ ಗಂಭೀರ ಗಾಯ (Kantara-1's dance artistes' vehicle overturns - 6 seriously injured)
ಕಾಂತರ-1 ಚಿತ್ರದ ನೃತ್ಯ ಕಲಾವಿದರಿದ್ದ ವಾಹನ ಪಲ್ಟಿ- 6 ಮಂದಿಗೆ ಗಂಭೀರ ಗಾಯ
(Kundapura) ಕುಂದಾಪುರ: ಕಾಂತರ-1 ಚಿತ್ರದ ನೃತ್ಯ ಕಲಾವಿದರಿದ್ದ ವಾಹನ ಪಲ್ಟಿಯಾದ ಪರಿಣಾಮ 6 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಕುಂದಾಪುರ ತಾಲೂಕಿನ ಹಾಲ್ಕಲ್ ರಸ್ತೆಯಲ್ಲಿ ಸಂಭವಿಸಿದೆ.
ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರು ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. 25 ಮಂದಿ ನೃತ್ಯ ಕಲಾವಿದರನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ 6 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳ ಪೈಕಿ ಹಲವರಿಗೆ ಜಡ್ಕಲ್ಲ್ ನ ಮಹಾಲಕ್ಷ್ಮಿ ಕ್ಲೀನಿಕ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೂನಿಯರ್ ನೃತ್ಯ ಕಲಾವಿದರು ಹಾಡಿನ ಚಿತ್ರೀಕರಣಕ್ಕಾಗಿ ಬಂದಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಇನ್ನೂ ನಾಲ್ಕು ದಿನಗಳ ಕಾಲ ಚಿತ್ರೀಕರಣ ಬಾಕಿಯಿದೆ.