ಕಾಪು: ಮೂರು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಪನ್ನ(Kapu Jarde Mari Pooje)
ಕಾಪು: ಮೂರು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಪನ್ನ
(Kaup) ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆಮಾರಿಯಮ್ಮ ಗುಡಿ, ಹೊಸ ಮಾರಿಯಮ್ಮ ಗುಡಿ, ಹಾಗೂ ಕಲ್ಯ ಮಾರಿಯಮ್ಮ ಗುಡಿಗಳಲ್ಲಿ ಏಕಕಾಲದಲ್ಲಿ ತುಳುವರ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.
ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಡ ಮಾರಿಪೂಜೆ ಹಾಗೂ ನವಂಬರ್ ತಿಂಗಳಾಂತ್ಯದಲ್ಲಿ ಜಾರ್ದೆ ಮಾರಿ ಪೂಜೆ ನಡೆಯುತ್ತದೆ.
ಸುಗ್ಗಿ ಹಾಗೂ ಆಷಾಡ ತಿಂಗಳ ಮಾರಿ ಪೂಜೆಯಲ್ಲಿಅತೀ ಹೆಚ್ಚಿನ ಭಕ್ತಾಧಿಗಳು ಕಾಪುವಿನ ಮಾರಿ ಗುಡಿಗಳಿಗೆಆಗಮಿಸುತ್ತಿದ್ದು, ಜಾರ್ದೆಮಾರಿ ಪೂಜೆಯಲ್ಲಿ ಭಕ್ತಾಧಿಗಳ ಸಂಖ್ಯೆ ಇಳಿಮುಖವಾಗುತ್ತದೆ.
ಕಾಪು ಮಾರಿಪೂಜೆಯಲ್ಲಿ ಕುರಿ ಹಾಗೂ ಕೋಳಿಗಳ ಬಲಿ ನಡೆಯುತ್ತದೆ. ಸರಕಾರ ಬಲಿ ನೀಡದಂತೆ ತಡೆನೀಡಿದ್ದರೂ, ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಕೋಳಿಗಳನ್ನು ತಂದು ಕಡಿದು ತಮ್ಮ ಮನೆಗಳಿಗೆ ಕೊಂಡೊಯ್ಯತ್ತಾರೆ. ಪ್ರತಿ ಮಾರಿ ಪೂಜೆಗಳಲ್ಲಿ ಲಕ್ಷಾಂತರ ಕೋಳಿಗಳ ಬಲಿ ನಡೆಯುವುದೂ ಇಲ್ಲಿಯ ವಿಶೇಷಗಳಲ್ಲೊಂದು.