ಕಾಪು : ಮೋಟೋರೈಸ್ಡ್ ಟ್ರೈಸಿಕಲ್ ವಿತರಣೆ
ಕಾಪು : ಮೋಟೋರೈಸ್ಡ್ ಟ್ರೈಸಿಕಲ್ ವಿತರಣೆ
(Kaup)ಕಾಪು : ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲಚೇತನರಿಗೆ ನೀಡುವ ಮೋಟೋರೈಸ್ಡ್ ಟ್ರೈಸಿಕಲನ್ನು ಶುಕ್ರವಾರ ಶಾಸಕರ ಕಚೇರಿಯಲ್ಲಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಫಲಾನುಭವಿ ನಫ್ರಿಶಾತ್ತುಲಾ ಮಿಶ್ರಿಯಾ ಅವರಿಗೆ ವಿತರಿಸಲಾಯಿತು.
ಶೇಕಡಾ 75 ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಮತ್ತು ಕೈ ಸ್ವಾಧೀನವಿರುವ ಮಾನಸಿಕವಾಗಿ ಸ್ವಸ್ಥರಿರುವವರಿಗೆ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಓರ್ವ ಫಲಾನುಭವಿಗೆ ಮೋಟೋರೈಸ್ಡ್ ಟ್ರೈಸಿಕಲ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಕಲಚೇತನರ ಇಲಾಖೆಯ ಶಿವಾಜಿ ಉಪಸ್ಥಿತರಿದ್ದರು.