ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ದಂಪತಿ ಭೇಟಿ (Ex Minister KS Eshwarappa Couple visit Kapu Hosa Marigudi)
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ದಂಪತಿ ಭೇಟಿ
(Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಂಗಳವಾರ ಸಂಜೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ದಂಪತಿ ಭೇಟಿ ನೀಡಿ, ಇಳೆಕಲ್ ಶಿಲೆಯಿಂದ ನಿರ್ಮಾಣವಾಗುತ್ತಿರುವ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮಾರಿಯಮ್ಮನ ದರ್ಶನ ಪಡೆದು, ಹಾಗೂ ನವದುರ್ಗಾ ಲೇಖನ ಯಜ್ಞದ ಮಾಹಿತಿ ಪಡೆದು ಕುಟುಂಬ ಸಮೇತರಾಗಿ ಲೇಖನ ಬರೆದು ಶಿಲಾಸೇವೆಯೊಂದಿಗೆ ಅಮ್ಮನಿಗೆ ಸಮರ್ಪಿಸಲು ಸಂಕಲ್ಪಿಸಿದರು.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯರವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ತಂತ್ರಿವರ್ಯರಾದ ಕುಮಾರಗುರು ತಂತ್ರಿಯವರು ಈಶ್ವರಪ್ಪ ದಂಪತಿಗಳಿಗೆ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.
ಮಾರಿಗುಡಿಯ ವತಿಯಿಂದ ಈಶ್ವರಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಉಡುಪಿಯ ನಿಕಟಪೂರ್ವ ಶಾಸಕ, ಕೆ ರಘುಪತಿ ಭಟ್, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಯೋಗೀಶ್ ವಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.