# Tags
#ಧಾರ್ಮಿಕ #ಸಂಘ, ಸಂಸ್ಥೆಗಳು

 ಕುಂಭಾಶಿ – ಆನೆಗುಡ್ಡೆ ಜಾತ್ರೆಯ ಅಂಗವಾಗಿ ಪಂಚವರ್ಣದಿಂದ 232ನೇ ಸ್ವಚ್ಛತಾ ಅಭಿಯಾನ (23nd Cleanliness campaign by Panchavarna as part of Kumbhashi – Anegudde Fastival)

ಕುಂಭಾಶಿ – ಆನೆಗುಡ್ಡೆ ಜಾತ್ರೆಯ ಅಂಗವಾಗಿ ಪಂಚವರ್ಣದಿಂದ 232ನೇ ಸ್ವಚ್ಛತಾ ಅಭಿಯಾನ

(Kota) ಕೋಟ : ಡಿ.5 ರಂದು ಕುಂಭಾಶಿಯ ಆನೆಗುಡ್ಡೆ ಶ್ರೀವಿನಾಯಕ ದೇಗುಲದ ವಾರ್ಷಿಕ ಜಾತ್ರೋತ್ಸವ ಜರಗಲಿದ್ದು, ಆಪ್ರಯುಕ್ತ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ 232ನೇ ಸ್ವಚ್ಛತಾ ಅಭಿಯಾನ ಭಾನುವಾರ ದೇಗುಲದ ವಠಾರ ಸ್ವಚ್ಛಗೊಳಿಸುವ ಮೂಲಕ ನೆರವೇರಿತು.

ದೇಗುಲದ ಮೊಕ್ತೇಸರರಾದ ಶ್ರೀರಮಣ ಉಪಾಧ್ಯಾಯ ಚಾಲನೆ ನೀಡಿದರು.

ದೇಗಲದ ಮೊಕ್ತೇಸರ ವೃಂದ, ಸಿಬ್ಬಂದಿವರ್ಗ, ಪAಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಜಿತ್ ಆಚಾರ್, ಸಂಚಾಲಕ ಅಮೃತ್ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್,  ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2