# Tags
#social service

ಕುಮಾರ ಪೆರ್ನಾಜೆ ಕುಟುಂಬ ಜೇನಿನೊಂದಿಗೆ ಸರಸ,  ಜೇನಿನ ಜೊತೆಗಾರ  (Kumar Pernaje Family with honey)

ಕುಮಾರ ಪೆರ್ನಾಜೆ ಕುಟುಂಬ ಜೇನಿನೊಂದಿಗೆ ಸರಸ, ಜೇನಿನ ಜೊತೆಗಾರ

ಜೇನು ಕುಟುಂಬ ಬಗ್ಗೆ ಸವಿತಾ ಕೊಡಂದೂರುರವರ ವಿಶೇಷ ವರದಿ.

(Putturu) ಪುತ್ತೂರು: ದಕ ಜಿಲ್ಲೆಯ ಪುತ್ತೂರು ತಾಲೂಕಿನ ಮೂಡ್ನರು ಗ್ರಾಮದ ಕುಮಾರ ಪೆರ್ನಾಜೆ ಕುಟುಂಬವು ಜೇನಿನೊಂದಿಗೆ ಸರಸ ಆಡುತ್ತಿದ್ದು, ಜೇನಿನ ಜೊತೆಗಾರನಾಗಿದೆ.

  ಜೇನುತುಪ್ಪ ತಿನ್ನಲು ಮಾತ್ರ ತುಂಬಾ ಸಿಹಿ ಆದರೆ ಜೇನುನೊಣಗಳು ಮಾತ್ರ ತುಂಬಾ ಅಪಾಯಕಾರಿ. ಜೇನ್ನೊಣಗಳು ಕಚ್ಚಿದರೆ ಅದರಿಂದ ವಿಪರೀತ ನೋವಾಗುವುದು ಸಹಜ, ಆದರೆ ಇಂತಹ ಜೇನುನೊಣಗಳು ಮುಖದ ಮೇಲೆ ಗಡ್ಡದಂತೆ ಕುಳಿತು ಬಿಟ್ಟರೆ ಆಶ್ಚರ್ಯಪಡಬೇಡಿ. ಅಭೂತಪೂರ್ವ ಸಾಧನೆ ಮಾಡುತ್ತಿರುವ ಕುಮಾರ ಪೆರ್ನಾಜೆ ಅವರಿಗೆ ಜೇನುನೊಣ ಎಂದರೆ ತುಂಬಾ ಪ್ರೀತಿ. ಅವುಗಳಿಗೂ ಅಷ್ಟೇ ಹಾರಿ ಬಂದು ಅವರ ಸುತ್ತ ಮುತ್ತುತ್ತವೆ. ಅಷ್ಟೇ ಅಲ್ಲ ಮುಖದ ಮೇಲೆಲ್ಲಾ ಹರಿದಾಡುತ್ತವೆ. ಗಡ್ಡದಂತೆ ಗೂಡು ಕಟ್ಟುತ್ತವೆ. ಚಿತ್ರದಲ್ಲಿ ಕಂಡಾಗ ಅರ್ಥವಾಗುತ್ತದೆ   ಜೇನು ಮತ್ತು ಪೆರ್ನಾಜೆಯವರ ಅಸಲಿ ಪ್ರೀತಿ.

  ವಿಭಿನ್ನ ಆಕಾರದಲ್ಲಿ ಕ್ರಿಯಾಶೀಲರಾಗಿ ಅರಳುತ್ತಿರುವ ದಕ ಜಿಲ್ಲೆಯ ಪುತ್ತೂರು ತಾಲೂಕಿನ ಮೂಡ್ನರು ಗ್ರಾಮದ ಕುಮಾರ ಪೆರ್ನಾಜೆ ಕುಟುಂಬ.

 ಜೇನುನೊಣ ಎಂದರೆ ಜನರು ಬಹಳ ಹೆದರುತ್ತಾರೆ.  ಸಾಮಾನ್ಯವಾಗಿ ವಿವಿಧ ಬೆಳೆಗಳ ಜೊತೆ ಕೃಷಿಯನ್ನು ನಂಬಿರುವವರು ಜನತೆ ಜೇನಿನೊಂದಿಗೆ ತನ್ನ ಅವಿನಾಭಾವ ಸಂಬಂಧವನ್ನು ತೊಡಗಿಸಿಕೊಂಡಿದ್ದಾರೆ.  ಕುಮಾರ ಪೆರ್ನಾಜೆ ಕುಟುಂಬದವರು ಯಾವುದೇ ಅಂಜಿಕೆಯಿಲ್ಲದೆ ಸ್ನೇಹದಿಂದಿದ್ದು, ಜೇನಿನ ಗೂಡಿಗೆ ಕೈ ಹಾಕಿ ಎಂಥವರನ್ನೂ ಆಶ್ಚರ್ಯಚಕಿತ ಆಗುವಂತೆ ಮಾಡುತ್ತಾರೆ.

ಈ ಕುಟುಂಬ ಜೇನು ನೊಣದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದು ಕಣ್ಣು- ಕಿವಿ ಮುಖದ ಮೇಲೆ ಹರಿದಾಡಿದರೂ ಏನು ಮಾಡುತ್ತಿಲ್ಲ.

 ಮನಸ್ಸಿನ ನೆಮ್ಮದಿಗಾಗಿ ಆಧುನಿಕ ಬದುಕಿನ ಜಂಜಾಟದಲ್ಲಿ ಅಪಾಯಕಾರಿ ಜೇನುಗೂಡನ್ನು ನೋಡಿ ನಾನು ಬದುಕಬಹುದು ಎನ್ನುವ ಸೌಮ್ಯ ಪೆರ್ನಾಜೆ,

 ರಾಣಿಯನ್ನು ಗಲ್ಲದಲ್ಲಿ ಬಿಟ್ಟಾಗ ಮುಖದ ತುಂಬಾ ಆವರಿಸಿ ಬಂದು ಕುಳಿತುಕೊಳ್ಳುತ್ತವೆ. ನಮ್ಮಲ್ಲಿ ತಾಳ್ಮೆ ಮತ್ತು ಸಹನೆ ಇದ್ದರೆ ಒಂದು ಅಭೂತಪೂರ್ವ ಕಲ್ಪನೆ ಇಂದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿಕೊಳ್ಳುತ್ತದೆ ಎಂದರು.

  ಜನರು ಅಂಜಿಕೆಯಿಂದ ಜೇನುಗೂಡಿಗೆ ಬೆಂಕಿಯಿಟ್ಟು ನಾಶಗೊಳಿಸುವ ಸಂಸ್ಕೃತಿ ನಮ್ಮದಾಗದೆ, ಅವುಗಳನ್ನು ನಮ್ಮಂತೆ ಬದುಕಲು ಬಿಡಿ. ಜೇನಿಗೋಸ್ಕರ ಅದರ ಕು ನಾಶ ಮಾಡಬೇಡಿರಿ ಎನ್ನುತ್ತಾರೆ ಕುಮಾರರವರು.  

  ಭಾವನೆಯನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸುಂದರ. ದಾರಿ ಇಲ್ಲ ಎಂದು ನಡೆಯುವುದನ್ನೇ ನಿಲ್ಲಿಸಬಾರದು. ನಾವು ನಡೆದದ್ದೇ ದಾರಿ ಆಗಬೇಕು. ಆ ದಾರಿ ನಾಲ್ಕು ಜನರಿಗೆ ಸ್ಫೂರ್ತಿಯಾಗಬೇಕು.

  ಪೆರ್ನಾಜೆ ಕುಟುಂಬದವರ ಅದ್ಭುತ ಅಪರೂಪದ ಊಹೆಗೂ ನಿಲುಕದ ಜೇನು ಗಡ್ಡದ ಚಿತ್ರಣವಿದೆ. ಪತ್ನಿ ಸೌಮ್ಯ ಪೆರ್ನಾಜೆ, ಮಕ್ಕಳಾದ ನಂದನ್ ಕುಮಾರ್, ಚಂದನ್ ಕುಮಾರ್ ಪೆರ್ನಾಜೆ ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಏನಿಲ್ಲ ಎಂಬಂತೆ ಹಾಡು ಅಕ್ಷರಶ: ಇಲ್ಲಿದೆ.

 ಪೆರ್ನಾಜೆ ಕುಟುಂಬವು ಈಗಾಗಲೇ ಶಾಲಾ ಮಕ್ಕಳಿಗೆ, ರೋಟರಿ ಕ್ಲಬ್, ಕಾಲೇಜು ಮಕ್ಕಳಿಗೆ, ಹೀಗೆ ಹಲವಾರು ಕಡೆಗಳಲ್ಲಿ ಜೇನು ಗಡ್ಡ ಪ್ರದರ್ಶನ ಮತ್ತು ಜೇನು ಮಾಹಿತಿ ಮೆಚ್ಚುಗೆ ಪಾತ್ರರಾಗಿದ್ದಾರೆ.

  ಈಗಾಗಲೇ ರಾಷ್ಟ್ರೀಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಆವಿಷ್ಕಾರಿ ರೈತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ, ಜಿಲ್ಲಾ, ತಾಲೂಕು ಸನ್ಮಾನಗಳನ್ನು ಪಡೆದಿದ್ದಾರೆ.

  ಗ್ರಾಮೀಣ ಕಲಾ ಪ್ರತಿಭೆಗಳನ್ನು ಒಗ್ಗೂಡಿಸಿ ಸ್ವರ ಸಿಂಚನ ಕಲಾ ತಂಡದಿಂದ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದ್ದಾರೆ.    

 ಹೊಸ ಹೊಸ ಸಂಶೋಧನೆಯು ಇವರ ಹವ್ಯಾಸವಾಗಿದ್ದು, ಇದೀಗ ಹನಿ ಪಾರ್ಕ್ (ಜೇನಿನ ಕನಸಿನ ಮನೆ) ಮಾಡುತ್ತಿದ್ದಾರೆ. ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡ ಗುಣವಿರುತ್ತದೋ ಆ ವ್ಯಕ್ತಿ ತನಗರಿವಿಲ್ಲದಂತೆ ಬಹಳ ಎತ್ತರಕ್ಕೆ ಬೆಳೆಯುತ್ತಾನೆ.

    ಕೋವಿ, ಬೋರ್ಡೋ ದ್ರಾವಣ ಸ್ಪ್ರೈನ್ ಟೆಕ್ನಿಕ್, ಸಿಮೆಂಟ್ ಶೀಟ್ ನಲ್ಲಿ ಜೇನುಪೆಟ್ಟಿಗೆ, ಕೃಷಿ ವಲಯದಲ್ಲಿ ಹೊಸ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡು ಅವಿರತ ಸಾಧನೆಯ ಗರಿಮೆಯನ್ನು ತಮ್ಮದಾಗಿಸಿಕೊಂಡು   ಸಾಧಕತನ ಮೆರೆದು ಕೃಷಿಯ ಮಹತ್ಕಾರ್ಯವನ್ನು ಸಾಧಿಸಿ, ಜೇನು ಗಡ್ಡ ಕಲೆಯ ಅನನ್ಯ ಸಾಧಕರಾಗಿದ್ದಾರೆ.

ಈ ಬಗ್ಗೆ ಸಮರ್ಪಕ ಮಾಹಿತಿಗಾಗಿ

ಕುಮಾರ್ ಪೆರ್ನಾಜೆ, ಪುತ್ತೂರು ಪೆರ್ನಾಜೆ ಮನೆ ಮತ್ತು ಅಂಚೆ ಪುತ್ತೂರು ತಾಲೂಕು .. 5 7 4 2 2 3

ಈ ಸಂಖ್ಯೆಯನ್ನು ಸಂಪರ್ಕಿಸಬಹುದು.  ಮೊ:- 9480240643.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2