ಕೂಡ್ಲಿಗಿ : ಒಳಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ತಮಟೆ ಚಳುವಳಿ (Koodligi)
ಕೂಡ್ಲಿಗಿ : ಒಳಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ತಮಟೆ ಚಳುವಳಿ
(Vijaya nagara – Koodligi) ವಿಜಯನಗರ ಜಿಲ್ಲೆ ಕೂಡ್ಲಿಗಿ: ಮಾದಿಗ ದಂಡೋರ ಹೋರಾಟ ಸಮಿತಿ, ಮಾದಿಗರ ಐಕ್ಯತಾ ವೇದಿಕೆಯವರು ಒಳ ಮೀಸಲಾತಿ ಜಾರಿ ಹೋರಾಟಗಾರರು ಒಳಮೀಸಲಾತಿ ಅನುಷ್ಠಾನಕ್ಕೆ ತರುವಂತೆ ಅಧಿವೇಶನದಲ್ಲಿ, ಸರ್ಕಾರಕ್ಕೆ ಒತ್ತಾಯಿಸುವಂತೆ ಹೋರಾಟಗಾರರು ತಮಟೆ ಚಳುವಳಿಯ ಮೂಲಕ, ಶಾಸಕರಾದ ಎನ್.ಟಿ. ಶ್ರೀನಿವಾಸ್‌ರವರಲ್ಲಿ ಮನವಿ ಮಾಡಿದ್ದಾರೆ.
ತಮಟೆ ಚಳುವಳಿಯು ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಭವನದಿಂದ ರಂಭಗೊಂಡು, ಪಟ್ಟಣ ಪ್ರಮುಖ ರಸ್ತೆಗಳು ಹಾಗೂ ಪ್ರಮುಖ ವೃತ್ತಗಳ ಮೂಲಕ ಪಟ್ಟಣದಲ್ಲಿ ಸಂಚರಿಸಿತು.
ಚಳುವಳಿ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಅಧಿವೇಶನದಲ್ಲಿ ರಾಜ್ಯದ 224 ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರುಗಳು ಭಾಗವಹಿಸಲಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಒಳ ಮೀಸಲಾತಿಯ ಜಾರಿ ಮಾಡುವಂತೆ ಒತ್ತಾಯಿಸಿ, ಹೋರಾಟದ ಪರ ಧ್ವನಿ ಎತ್ತುವಂತೆ ಮನವಿ ಮಾಡಲಾಗುತ್ತಿದೆ. ನಮ್ಮ ಹಕ್ಕೊತ್ತಾಯ ಮನವರಿಕೆ ಮಾಡಿಕೊಡುವ ಉದ್ಧೇಶದಿಂದ ಮಾಡಲಾಗಿದೆ. ಈ ಬಗ್ಗೆ ಶಾಸಕರ ಮನೆ ಅಥವಾ ಕಚೇರಿಯ ಮುಂದೆ ತಮಟೆ ಚಳುವಳಿ ಮಾಡಲಾಗುತ್ತಿದೆ ಎಂದರು.
ಕೂಡ್ಲಿಗಿ ಪಟ್ಟಣದಲ್ಲಿರುವ ಶಾಸಕ ಎನ್.ಟಿ. ಶ್ರೀನಿವಾಸ್‌ರವರ ಕಚೇರಿ ಬಳಿ, ಹೋರಾಟಗಾರರು ತಮಟೆ ಬಾರಿಸುವ ಮೂಲಕ ಮನವಿ ಮಾಡಿದರು. ಅಧಿವೇಶನದಲ್ಲಿ ತಮ್ಮ ಹಕ್ಕೊತ್ತಾಯದ ಕುರಿತು, ಗಂಭೀರವಾಗಿ ಚರ್ಚಿಸುವಂತೆ ಸರ್ಕಾರದ ಮೇಲೆ ಪ್ರಭಾವ ಬೀರುವಂತೆ ಕೋರಲಾಯಿತು.
ಮನವಿ ಸ್ವೀಕರಿಸಿದ ಶಾಸಕ ಡಾ. ಎನ್. ಟಿ ಶ್ರೀನಿವಾಸ್ ರವರು ಮಾತನಾಡಿ, ಶೋಷಿತ ಸಮುದಾಯ ಮಾದಿಗ ಸಮುದಾಯವಾಗಿದ್ದು. ತಾವು ಅಧಿವೇಶನದಲ್ಲಿ ಚರ್ಚಿಸುವುದಾಗಿ, ಹಾಗೂ ಹೋರಾಟಗಾರರ ಪರ ನಿಲುವು ಮಂಡಿಸುವುದಾಗಿ ಭರವಸೆ ನೀಡಿದರು.
ಹೋರಾಟಗಾರರಾದ ಎಸ್ ದುರ್ಗೇಶ್, ಸಾಲುಮನಿ ರಾಘವೇಂದ್ರ, ಮಾಜಿ ಸೈನಿಕರಾದ ಹೆಚ್. ರಮೇಶ್. ಮಹಿಳಾ ಮುಖಂಡರಾದ ಶ್ರೀಮತಿ ವಿಶಾಲಕ್ಷಮ್ಮ ರಾಜಣ್ಣ, ವಕೀಲರಾದ ಡಿ.ಎಚ್. ದುರ್ಗೇಶ್ ಹೆಗ್ಡಾಳು ಕೆ.ಮಹೇಶ್, ಆರ್ಟಿಐ ಪಿ. ಸಂತೋಷ್ ಕುಮಾರ, ತಿಮ್ಮನಹಳ್ಳಿ ಬಸಣ್ಣ, ಎಳನೀರು ಗಂಗಣ್ಣ, ಬಿ. ಮಹೇಶ್, ಕಂದಗಲ್ ಪರಶುರಾಮ. ಬಿ. ಶಿವರಾಜ್, ಗುಡೆಕೋಟೆ ಕಿ.ಎಸ್.ನಾಗರಾಜ್, ಹೆಚ್ ಪರಶುರಾಮ, ಚೌಡಾಪುರ ಬಸರಾಜ, ಹೊಸಳ್ಳಿ ಹೊನ್ನೂರಸ್ವಾಮಿ, ಹೊಸಳ್ಳಿ ಬಸವರಾಜ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ, ನೂರಾರು ಹೋರಾಟಗಾರರು ತಮಟೆ ಚಳುವಳಿಯಲ್ಲಿ ಭಾಗವಹಿಸಿದ್ದರು.