ಕೂಡ್ಲಿಗಿ: ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ (Koodligi : Govt pre graduation college students to golgen opportunity to watch the session)
ಕೂಡ್ಲಿಗಿ: ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ
ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಉತ್ತಮ ಕಾರ್ಯ, ಜನರಿಂದ ಶ್ಲಾಘನೆ
(Vijayanagara, Koodligi) ವಿಜಯನಗರ, ಕೂಡ್ಲಿಗಿ: ಇಲ್ಲಿಯ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ಪ್ರಸ್ತುತ ಬೆಳಗಾವಿಯ ಸುವರ್ಣ ಸೌಧದಲ್ಲಿ, ಜರಗುತ್ತಿರುವ ಚಳಿಗಾಲದ ಅಧಿವೇಶನವನ್ನು ಖುದ್ದು ನೇರವಾಗಿ ವೀಕ್ಷಿಸುವ ಸುವರ್ಣಾವಕಾಶವನ್ನು, ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್. ಟಿ ಶ್ರೀನಿವಾಸ್‌ರವರು ಕಲ್ಪಿಸಿ ಕೊಟ್ಟಿದ್ದಾರೆ.
ಶಾಸಕರು ಒಟ್ಟು 200ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಅವಕಾಶವನ್ನು ಶಾಸಕ ಶ್ರೀನಿವಾಸ್ ಕಲ್ಪಿಸಿಕೊಟ್ಟಿದ್ದಾರೆ.
ಅಧಿವೇಶನ ಆರಂಭಗೊಂಡ ಎರಡನೇ ದಿನ ಕೂಡ್ಲಿಗಿ ಕಾಲೇಜಿನ, ಪಿಯುಸಿ ತರಗತಿಯ 54 ವಿದ್ಯಾರ್ಥಿಗಳು ಸುವರ್ಣ ಸೌಧದಲ್ಲಿ ಜರಗುವ ಅಧಿವೇಶನವನ್ನು, ವೀಕ್ಷಿಸಿ ಕಣ್ತುಂಬಿಸಿಕೊಂಡಿದ್ದಾರೆ.
ಅಧಿವೇಶನ ಮುಗಿಯುವುದರೊಳಗಾಗಿ, ಇನ್ನುಳಿದ ವಿದ್ಯಾರ್ಥಿಗಳು ಅಧಿವೇಶನವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನ ವೀಕ್ಷಣೆಗೆ ವಿದ್ಯಾರ್ಥಿಗಳು ಬೆಳಗಾವಿಗೆ ತೆರಳಲು, ಶಾಸಕರು ಸಾರಿ ಸಂಸ್ಥೆಯ ಬಸ್ಸನ್ನು ಕಾಯ್ದಿರಿಸಿ ಕ್ರಮ ಜರಗಿಸಿದ್ದಾರೆ.
ಬೆಳಗಾವಿ ಸುವರ್ಣ ಸೌಧಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ, ಹಾಗೂ ಕರೆತರುವ ಮೇಲ್ವಿಚಾರಣೆಗೆ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಟಿ. ಕೊತ್ಲಮ್ಮರವರು, ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನಿಯೋಜಿಸಿ ಕ್ರಮ ಜರುಗಿಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಗಳು ಪ್ರತಿಕ್ರಯಿಸಿ, ನಾವು ಅಧಿವೇಶನದ ಕಲಾಪವನ್ನು ಖುದ್ದು ವೀಕ್ಷಿಸಿ ಪುಳಕಿತರಾದೆವು. ನಾವು ಅಧಿವೇಶನವನ್ನು ವೀಕ್ಷಿಸಲು, ಸುವರ್ಣ ಸೌಧ ಪ್ರವೇಶಿಸುವುದನ್ನು ಗಮನಿಸಿದ ಶಾಸಕ ಶ್ರೀನಿವಾಸ್, ಕೂಡಲೇ ನಮ್ಮ ಬಳಿ ಧಾವಿಸಿ ಬಂದು, ಶಿಕ್ಷಣ ಸಚಿವ ಮಧು ಬಂಗಾರಪ್ಪನವರನ್ನು ನಾವಿರುವೆಡೆಗೆ ಕರೆತಂದರು. ನಮ್ಮನ್ನೆಲ್ಲ ಖುದ್ದು ಶಾಸಕರೇ ಸಚಿವರಿಗೆ ಪರಿಚಯಿಸಿಕೊಟ್ಟರು. ಅವರೊಂದಿಗೆ ಕೆಲ ಹೊತ್ತು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು.
ಶಾಸಕರು ಅಧಿವೇಶನದಲ್ಲಿನ ಶೂನ್ಯ ವೇಳೆಯಲ್ಲಿ ಬಹು ಸಂತೋಷದಿಂದ ಉತ್ಸುಕತೆಯಿಂದ ನಮ್ಮೊಂದಿಗೆ ಮಾತುಕತೆ ನಡೆಸಿದರು. ಶಾಸಕರಾಗಿದ್ದೂ ಕೂಡ ನಮ್ಮೊಂದಿಗೆ ತೋರಿದ ಪ್ರೀತಿ ಅವರ ಸರಳತೆ, ನಮ್ಮ ಬಗ್ಗೆ ಇರುವ ಕಾಳಜಿ, ನಮಗೆ ತೋರಿದ ಮಮತೆ, ವಾತ್ಸಲ್ಯಕ್ಕೆ ನಾವು ಚಿರಋಣಿಗಳು. ಈ ಅಮೂಲ್ಯ ಕ್ಷಣಗಳನ್ನು, ನಾವು ಜೀವನದಲ್ಲಿ ಮರೆಯಲಾಗದ ಘಟನೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ .