ಕೆವಿಜಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಬಂಡಿವಾಡ ಶ್ರೀಕೃಷ್ಣ ಮಠ ಭೇಟಿ (KVG Bank President Srikanth M. Bandivala vist Udupi Sri Krishna matt)
ಕೆವಿಜಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಬಂಡಿವಾಡ ಶ್ರೀಕೃಷ್ಣ ಮಠ ಭೇಟಿ
(Udupi) ರಾಷ್ಟ್ರದ ಪ್ರಮುಖ ಗ್ರಾಮೀಣ ಬ್ಯಾಂಕುಗಳಲ್ಲಿ ಒಂದಾದಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಬಂಡಿವಾಡ ಶ್ರೀಕೃಷ್ಣ ಮಠಕ್ಕೆ ಸೋಮವಾರದಂದು ಭೇಟಿ ನೀಡಿ ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದ ರಿಂದ ಸರ್ವಜ್ಞ ಪೀಠದಲ್ಲಿ ಮಂತ್ರಾಕ್ಷತೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ಮುಖ್ಯ ವ್ಯವಸ್ಥಾಪಕ ಉಲ್ಲಾಸ ಗುನಗಾ, ರೀಜನಲ್ ವ್ಯವಸ್ಥಾಪಕ ವಿಜಯ್ ದೋತಿಹಾಲ್, ಉಡುಪಿ ಶಾಖೆಯ ಹಿರಿಯ ವ್ಯವಸ್ಥಾಪಕ ರಾಘವೇಂದ್ರ ಉಪಾಧ್ಯ ಉಪಸ್ಥಿತರಿದ್ದರು.