ಕೈ ರುಚಿ.. ರುಚಿ ರುಚಿಯಾದ ಅತಿ ರಸ ಅತ್ರಾಸ ತಯಾರಿ (Teasty athrasa …Athrasa)
ಕೈ ರುಚಿ.. ರುಚಿ ರುಚಿಯಾದ ಅತಿ ರಸ ಅತ್ರಾಸ ತಯಾರಿ
ಚಿತ್ರ, ಬರಹ: ಸೌಮ್ಯ ಪೆರ್ನಾಜೆ
(Putturu) ಪುತ್ತೂರು : ಮನೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳು ಸಂತೋಷವನ್ನು ನೀಡುತ್ತದೆ. ಆಹಾರದ ಬಗ್ಗೆ ಸ್ವಲ್ಪ ಹೊಗಳಿಕೆ ಸಿಕ್ಕಿದರಂತೂ ಬಹಳ ಖುಷಿ ಪಡುವ ನಮ್ಮವರು ಅವರ ಜೊತೆ ಸ್ವಲ್ಪ ಹೆಜ್ಜೆ ಹಾಕಿದರಂತೂ ಸ್ವರ್ಗಕ್ಕೆ ಹೋಗಿ ಬಂದ ಅನುಭವ ಬೇರೆ. ತಿನ್ನೋದರಲ್ಲಿ ಬಾಯಿಯ ಕಂಟ್ರೋಲ್ ಯಾಕೆ…! ಇಂತಹ ಸಾತ್ವಿಕ ಆಹಾರ ಸವಿ ಸವಿ ರುಚಿಯ ದಿಡೀರಾಗಿ ಅತಿರಸ ಎಂದಾಗಲೇ ಬಾಯಿಯಲ್ಲಿ ನೀರೂರಿಸುವ ಜನ ಸವಿಯಲು ಅತ್ಯಂತ ರುಚಿಕರವಾದ ತಿಂಡಿ ಸ್ವಾದ ಬಾಯಿ ಚಪ್ಪರಿಸಿ ಸವಿಯೋದಕ್ಕೆ ಬೆಸ್ಟ್ ಫುಡ್ ಸವಿದು ಮೆಚ್ಚಿಗೆ ಸೂಚಿಸಿದ ಜನ ನಾವು, ಈಗ ರೆಡಿ ಟು ಈಟ್ ಬಿಸಿ
ಸೀಸನ್ ನಲ್ಲಿ ಇರುವ ಜನ ಆಹಾರ ಸವಿ ಸವಿ ಇದು ಆರೋಗ್ಯಕರ ಫುಡ್ ಡಿಫರೆಂಟ್ ಕೈ ರುಚಿ ವಾವ್ ಫೆಂಟಾಸ್ಟಿಕ್… ಸಕ್ಕತ್ ಆಗಿದೆ…
ಖಾದ್ಯ ಹಬ್ಬದ ಅಡುಗೆಯಲ್ಲಿ ಈ ವಿಶೇಷವಾದ ಅತಿರಸವನ್ನ ಮಾಡುವುದು ಹೇಗೆ ಎಂದು ನೋಡೋಣ
ಬೇಕಾಗುವ ಪದಾರ್ಥಗಳು :
ಒಂದು ಕಪ್ಪು ಬೆಳ್ತಿಗೆ ಹಾಕಿ ಒಂದು ಕಪ್ ಬೆಲ್ಲ ಕಾಲು ಕಪ್ ತೆಂಗಿನಕಾಯಿ ತುರಿ, ಒಂದು ದೊಡ್ಡ ಚಮಚ ಗೋಧಿ ಹಿಟ್ಟು ಕರಿಯಲು ಬೇಕಾದಷ್ಟು ತುಪ್ಪ.
ಮಾಡುವ ವಿಧಾನ….
ಅಕ್ಕಿಯನ್ನು ತೊಳೆದು ಸ್ವಲ್ಪ ಆರಲು ಬಿಡಿ. ಎರಡು ಮೂರು ಗಂಟೆ ನಂತರ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ ನುಣ್ಣಗೆ ಹಿಟ್ಟು ಮಾಡಿಕೊಳ್ಳಿ. ನಂತರ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಬೆಲ್ಲ ಕರಗಿದ ಮೇಲೆ ಅದನ್ನು ಸೋಸಿ ಪಾಕ ಮಾಡಲು ಇಡಿ. ಅದಕ್ಕೆ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಕುದಿಸಿ, ಗೋಧಿಹಿಟ್ಟು ಎರಡು ಚಮಚ ತುಪ್ಪ ಹಾಕಿ ಚೆನ್ನಾಗಿ ಕಲಸಿ ಬಾಣಲೆಯಲ್ಲಿ ತುಪ್ಪ ಕಾಯಲಿಕ್ಕೆ ಇಟ್ಟು ಕೈಗೆ ಸ್ವಲ್ಪ ಬಾಳೆ ಎಲೆಗೂ ತುಪ್ಪ ಹಚ್ಚಿ, ಸ್ವಲ್ಪನೆ ಹಿಟ್ಟು ತಕ್ಕೊಂಡು ಬಾಳೆ ಎಲೆಯಲ್ಲಿ ತಟ್ಟಿ ತುಪ್ಪದಲ್ಲಿ ಕರೆಯಿರಿ. ಉರಿ ಸಣ್ಣಗೆ ಮಾಡಿಕೊಳ್ಳಿ ಇದು ಉಬ್ಬಿದಾಗ ಮಗುಚಿ ಹಾಕಿ ಸ್ವಲ್ಪ ಬೇಯಿಸಿ.
ಗೋಲ್ಡನ್ ಕಲರ್ ಬಂದರೆ ಸಾಕು ಕೂಡಲೇ ತಿನ್ನಲು ಗರಿ ಗರಿ ಯಾಗಿರುತ್ತದೆ .
ಮಡಕೆಯಲ್ಲಿ ಹಾಕಿ ಎರಡು ದಿನ ಬಿಟ್ಟು ತಿಂದರೆ ತುಂಬಾನೇ ರುಚಿ ಕರವಾಗಿರುತ್ತದೆ.
ಹಬ್ಬ ಹರಿದಿನಗಳಲ್ಲಿ, ನವರಾತ್ರಿ ಹಬ್ಬಕ್ಕೆ ಈ ಸವಿ ತಿಂಡಿಯನ್ನು ಮಾಡುತ್ತಾರೆ.
ಕೆಲವೊಮ್ಮೆ ಪಾಕ ಸರಿಯಾಗದಿದ್ದರೆ ಎಣ್ಣೆಗೆ ಹಾಕುವಾಗ ಬಿರಿಯುತ್ತದೆ (ಒಡೆಯುತ್ತದೆ). ಪಟಪಟ ಶಬ್ದ ಬಂದು ಎಣ್ಣೆ ಹಾರುತ್ತದೆ.
ಮಡಕೆಯಲ್ಲಿ ಹಾಕಿ ಇಟ್ಟರೆ ತಿನ್ನಲು ತುಂಬಾನೇ ರುಚಿ ಕರವಾಗಿರುತ್ತದೆ.
ಪ್ರತಿದಿನ ಮನೆಯಲ್ಲಿ ರುಚಿಕರ ಆಹಾರ ಸೇವಿಸುವುದೇ ಒಂದು ರೀತಿಯ ಮಜಾ ಅದರಲ್ಲೂ ರುಚಿಗೆ ತಿನ್ನಲು ರುಚಿಯಾಗಿ ಕಜ್ಜಾಯ ಫೆಂಟಾಸ್ಟಿಕ್ ವಂಡರ್ಫುಲ್ ಆರೋಗ್ಯಕರ ಫುಡ್. ನಾವು ತಿನ್ನುವ ಆಹಾರ ಕೇವಲ ಹೊಟ್ಟೆಯನ್ನು ತುಂಬಿಸುವುದಕ್ಕೆ ಮಾತ್ರವಲ್ಲದೆ, ನಾಲಗೆಗೆ ರುಚಿಯಾದ ಮತ್ತು ದೇಹಕ್ಕೆ ಹಿತ ಹಿತವಾದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಲಾಗುತ್ತದೆ.
ನಮ್ಮ ಆರೋಗ್ಯ ಸ್ವಾಸ್ಥ್ಯಕ್ಕೆ ಪೂರಕವಾಗಿದೆ. ಖಾದ್ಯ ಯಾರಿಗೂ ಇಷ್ಟವಾಗಲಿ ಎಂದು ಮನೆಯವರು ಮಾಡುವುದಲ್ಲ ತಮ್ಮ ಮನ ಸಂತೋಷಕ್ಕಾಗಿ ಎಂದು ಸವಿರುಚಿಗಳನ್ನು ತಯಾರಿಸುತ್ತಾರೆ.
ಇದು ಅಡುಗೆ ಹಳ್ಳಿಯ ಸಾಂಪ್ರದಾಯಿಕ ತಿಂಡಿ.