ಕೋಟೆಕಾರು ಉಚ್ಚಿಲ : ಗ್ಯಾಸ್ ಟ್ಯಾಂಕರ್‌ನಿಂದ ಹೈಡ್ರಾಲಿಕ್ ಆಸಿಡ್ ಸೋರಿಕೆ (Kotekar , Uchila : Hydraulic acid leakage from Gas Tanker)
ಕೋಟೆಕಾರು ಉಚ್ಚಿಲ : ಗ್ಯಾಸ್ ಟ್ಯಾಂಕರ್‌ನಿಂದ ಹೈಡ್ರಾಲಿಕ್ ಆಸಿಡ್ ಸೋರಿಕೆ
(Kotekar Uchila) ಕೋಟೆಕಾರ್ ಉಚ್ಚಿಲ: ರಾಷ್ಟ್ರೀಯ ಹೆದ್ದಾರಿ 66 ರ ಕೋಟೆಕಾರು ಉಚ್ಚಿಲ ಸಮೀಪ ತಾಂತ್ರಿಕ ದೋಷದಿಂದ ಅನಿಲ ಟ್ಯಾಂಕರಿನಿಂದ ಹೈಡ್ರಾಲಿಕ್ ಆಸಿಡ್ ಸೋರಿಕೆ ಆರಂಭವಾಗಿದ್ದು, ಸ್ಥಳದಲ್ಲಿ ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದು, ಎಂಆರ್ ಪಿಎಲ್ ತಂಡ ಮತ್ತು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಕಾರವಾರದಿಂದ ಕೊಚ್ಚಿಗೆ ಹೈಡ್ರಾಲಿಕ್ ಆಸಿಡ್ ಕೊಂಡೊಯ್ಯುವ ಟ್ಯಾಂಕರಿನಲ್ಲಿ ಘಟನೆ ನಡೆದಿದೆ. ಟ್ಯಾಂಕರಿನಿಂದ ಅನಿಲ ಸೋರಿಕೆಯಾಗುವುದನ್ನು ಗಮನಿಸಿದ ಚಾಲಕ ಹೆದ್ದಾರಿ ಬಳಿ ಟ್ಯಾಂಕರನ್ನು ನಿಲ್ಲಿಸಿದ್ದಾರೆ. ತಕ್ಷಣ ಪೊಲೀಸರಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ.
ಅನಿಲ ಸೋರಿಕೆಯಿಂದ ಶ್ವಾಸಕೋಶದ ತೊಂದರೆಯುಂಟಾಗುವ ಸಾಧ್ಯತೆಯಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ, ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಎಂಆರ್ ಪಿಎಲ್ ಮತ್ತು ಅಗ್ನಿ ಶಾಮಕ ತಂಡದವರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ಹೆದ್ದಾರಿಯಲ್ಲಿ ವಾಹನ ಸಂಚಾರ ಯಥಾಸ್ಥಿತಿಯಲ್ಲಿದ್ದು, ಯಾವುದೇ ಸೂಚನೆಗಳನ್ನು ಇಲಾಖೆ ಈವರೆಗೆ ಸ್ಥಳೀಯರಿಗೆ, ವಾಹನ ಸವಾರರಿಗೆ ನೀಡಿಲ್ಲ.