# Tags
#ಸಂಘ, ಸಂಸ್ಥೆಗಳು

ತೊಕ್ಕೊಟ್ಟು:  ಶ್ರೀ ಸೋಮೇಶ್ವರಿ ಸೌ. ಸ. ಸಂಘಕ್ಕೆ ಅಧ್ಯಕ್ಷರಾಗಿ ಉಮಾನಾಥ ನಾಯಕ್ ಪುನರಾಯ್ಕೆ (Tokkottu : Sri Someshwari Sauhardha sangha : Umanath Naik was re-elected AS THE President of the Society

ತೊಕ್ಕೊಟ್ಟು: ಶ್ರೀ ಸೋಮೇಶ್ವರಿ ಸೌ. . ಸಂಘಕ್ಕೆ ಅಧ್ಯಕ್ಷರಾಗಿ ಉಮಾನಾಥ ನಾಯಕ್ ಪುನರಾಯ್ಕೆ

(Ullala) ಉಳ್ಳಾಲ: ತೊಕ್ಕೊಟ್ಟು ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿ. ದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಸಮಿತಿಗೆ ನೂತನ
ಅಧ್ಯಕ್ಷರಾಗಿ ಉಮಾನಾಥ ನಾಯಕ್ ಉಳ್ಳಾಲ್ ಹಾಗೂ ಉಪಾಧ್ಯಕ್ಷರಾಗಿ ಮಿಥಿಲೇಶ್ ನಾಯಕ್ ಮಣ್ಣಗುಡ್ಡೆ ಅವರು ಅವಿರೋಧವಾಗಿ ಪುನರಾಯ್ಕೆ ಗೊಂಡಿದ್ದಾರೆ.

  ನಿರ್ದೇಶಕರಾಗಿ ಜೆ. ರವೀಂದ್ರನಾಯಕ್, ನರಸಿಂಹ ನಾಯಕ್ ಹರೇಕಳ, ಮುರಳೀಧರ ನಾಯಕ್ ಚೆಂಬುಗುಡ್ಡೆ, ಎಸ್ .ಯು. ಲಕ್ಷ್ಮಣ ನಾಯಕ್ ಸಂತೋಷ್ ನಗರ, ಯೋಗೀಶ್ ನಾಯಕ್ ಪಂಪ್ ವೆಲ್, ಅನೂಷ್ ನಾಯಕ್ ಭಂಡಾರಬೈಲು, ಹೇಮಾ ಕೇಶವ ನಾಯಕ್, ಆಶಾ ನಾಯಕ್ ಗೋರಿಗುಡ್ಡೆ ಅವರು ಆಯ್ಕೆಯಾಗಿರುತ್ತಾರೆ.
 ಮಂಗಳೂರು ಸಹಕಾರ ಸಂಘಗಳ‌ ಉಪನಿಬಂಧಕರ ಇಲಾಖೆಯ ಅಧಿಕಾರಿ ನವೀನ್ ಕುಮಾರ್ ಎಂ.ಎನ್. ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಸಂಘದ ಕಾರ್ಯದರ್ಶಿ ಲಾವಣ್ಯ ರಾಜೇಶ್ ನಾಯಕ್, ಸಿಬ್ಬಂದಿ ಪವಿತ್ರ ಸಹಕರಿಸಿದರು.

ಸಂಸ್ಥಯ ನಿರ್ದೇಶಕರು ಉಪಸ್ಥಿತರಿದ್ದರು. 

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2