“ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಸಚಿನ್ ಉಚ್ಚಿಲರಿಗೆ ದ್ವಿತೀಯ ಸ್ಥಾನ (Second place for Sachin Uchila in ʼDasara Vaibhavaʼ Photo Contest)
“ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಸಚಿನ್ ಉಚ್ಚಿಲರಿಗೆ ದ್ವಿತೀಯ ಸ್ಥಾನ
(Mangaluru) ಮಂಗಳೂರು: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫಸ್೯ ಅಸೋಸಿಯೇಷನ್ (ರಿ.) ಮಂಗಳೂರು ವಲಯದ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ “ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಉಚ್ಚಿಲ ದಸರಾದ ಛಾಯಾಚಿತ್ರಕ್ಕೆ ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಅವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಮಂಗಳೂರು ಲಾಲ್‌ಬಾಗ್‌ನಲ್ಲಿರುವ ಸ್ಕೌಟ್ ಅಂಡ್ ಗೈಡ್ಸ್ ಸಭಾಭವನದಲ್ಲಿ ಜರಗಿದ “ಕಿಡ್ಸ್ ಫೋಟೋ ಫೆಸ್ಟ್” ಫೋಟೋಗ್ರಾಫಿ ಬಹುಮಾನ ವಿತರಣಾ ಸಮಾರಂಭದಲ್ಲಿ “ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.
ಬಹುಮಾನವನ್ನು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ವಿತರಿಸಿದರು.
ಕಾರ್ಯಕ್ರಮದಲ್ಲಿ ಎಸ್ಕೆಪಿಎ ಉಡುಪಿ – ದ.ಕ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್, ಹರೀಶ್ ಅಡ್ಯಾರ್, ದಯಾನಂದ್ ಬಂಟ್ವಾಳ, ಕರುಣಾಕರ್ ಕಾನಂಗಿ, ರಮೇಶ್ ಕಲಾಶ್ರೀ, ಅಜಯ್ ಮಂಗಳೂರು, ಅರ್ಜುನ್ ಆರ್, ವಿಶಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.