ದ್ವೇಷ ಭಾಷಣ : ಹಿಂದೂ ಜಾಗರಣ ವೇದಿಕೆ ಮುಖಂಡನ ಮೇಲೆ ಪ್ರಕರಣ ದಾಖಲು (Hate speech : Case filed against Hindu jagrana Vedike Leader Shrikanth Shetty)
ದ್ವೇಷ ಭಾಷಣ : ಹಿಂದೂ ಜಾಗರಣ ವೇದಿಕೆ ಮುಖಂಡನ ಮೇಲೆ ಪ್ರಕರಣ ದಾಖಲು
(Karkala) ಕಾರ್ಕಳ: ಹಿಂದೂ ಜಾಗರಣ ವೇದಿಕೆಯ ನೇತಾರ ಕಾರ್ಕಳದ ಶ್ರೀಕಾಂತ್ ಶೆಟ್ಟಿಯ ಮೇಲೆ ದ್ವೇಷ ಭಾಷಣಕ್ಕಾಗಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಶ್ರೀಕಾಂತ್ ಶೆಟ್ಟಿ, ಬೇರೆ ಬೇರೆ ಸಮುದಾಯಗಳ ನಡುವೆ ವೈರತ್ವ, ದ್ವೇಷ ಹಾಗೂ ವೈಮನಸ್ಸಿನ ಭಾವನೆಗಳನ್ನು ಉಂಟು ಮಾಡುವ ವೀಡಿಯೋವನ್ನು ಚಿತ್ರೀಕರಿಸಿ, ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ವೀಡಿಯೋ ವೈರಲ್ ಮಾಡಿದ್ದಾರೆ ಎಂಬ ಆರೋಪದಡಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 188/2024 ಕಲಂ: ಕಲಂ: 353(2) BNSನಂತೆ ಪ್ರಕರಣ ದಾಖಲಾಗಿದೆ.