# Tags
#ಶಾಲಾ ಕಾಲೇಜು #ಸಂಘ, ಸಂಸ್ಥೆಗಳು

ನಾನೂ ಸರಕಾರಿ ಶಾಲೆಯಲ್ಲಿ ಕಲಿತವ : ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ (I learned in government school : Koodligi MLA NT Shrinivas)

ನಾನೂ ಸರಕಾರಿ ಶಾಲೆಯಲ್ಲಿ ಕಲಿತವ : ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್

 ವಿದ್ಯಾರ್ಥಿ, ಶಿಕ್ಷಕರು ಮಕ್ಕಳ ಉತ್ತಮ ಭವಿಷ್ಯಕ್ಕೆ ಬುನಾದಿ ಹಾಕಬೇಕು

 (Vijayanagaŗa Koodligi) ವಿಜಯನಗರ, ಕೂಡ್ಲಿಗಿ: ನಾನೂ ನಮ್ಮೂರಾದ ನರಸಿಂಹಗಿರಿ ಸರಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದೆ.  ಸರಕಾರಿ ಶಾಲೆಯನ್ನು ಯಾರೂ ಯಾವುದೇ ಕಾರಣಕ್ಕೆ ಜರಿಯಬಾರದು ಎಂದು ಕೂಡ್ಲಿಗಿ  ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ರವರು ತಮ್ಮ ಬಾಲ್ಯದ   ನೆನಪುಗಳನ್ನು ಬಿಚ್ಚಿಟ್ಟರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಯೋಜಿಸಿದ್ದ, ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರು ದೇಶಕ್ಕೆ ಭವಿಷ್ಯದ ಸತ್ಪ್ರಜೆಗಳನ್ನು ನೀಡೋ ಹೊಣೆ ಹೊಂದಿದ್ದಾರೆ. ಆದ್ಧರಿಂದ  ಅವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಶಿಸ್ತು, ಸಂಸ್ಕಾರಗಳನ್ನು ನೀಡಿ, ಅವರ ಉತ್ತಮ ಭವಿಷ್ಯಕ್ಕಾಗಿ ಭದ್ರ ಬುನಾದಿ ಹಾಕಬೇಕಿದೆ ಎಂದರು.

  ಭಾರತದ ಸಂವಿಧಾನದ ದಿನದ ಪ್ರಯುಕ್ತ, ವೇದಿಕೆಯ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ನಮಿಸಿ, ಭಾರತಕ್ಕೆ ಅಂಬೇಡ್ಕರ್ ರವರ ಕೊಡುಗೆ, ಹಾಗೂ ಸಂವಿಧಾನ ಕುರಿತು ಮಾತನಾಡಿದರು.

 ವೇದಿಕೆಯಲ್ಲಿ SDMC ಸಮನ್ವಯ ಸಮಿತಿ ರಾಜ್ಯಾದ್ಯಕ್ಷ  ಉಮೇಶ್ ಜಿ ಗಂಗವಾಡಿ, SDMC ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ, SDMC ಸಮನ್ವಯ ಸಮಿತಿಯ ರಾಜ್ಯ ಜಿಲ್ಲಾ ತಾಲೂಕು ಘಟಕಗಳ ಮುಖಂಡರು, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ರಾಜ್ಯ ಕಾರ್ಯದರ್ಶಿ ಜಿ.ಎಸ್. ಪಾರ್ವತಿ, ರಾಜ್ಯ ಖಜಾಂಚಿ ಜ್ಯೋತಿ ರಾಮಶೆಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ವೆಂಕಟೇಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಿ. ಕೊಟ್ರಗೌಡ, SDMC ಸಮನ್ವಯ ಸಮಿತಿ ಕೂಡ್ಲಿಗಿ  ತಾಲೂಕಾಧ್ಯಕ್ಷರಾದ ಟಿ. ಭಾಗ್ಯ, ಹೂವಿನಹಡಗಲಿ ಸಮಿತಿಯ ಅಧ್ಯಕ್ಷರಾದ ಎಸ್.ಯಶೋಧ, ಬಿಇಒ ಪದ್ಮನಾಭ ಕರಣಂ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಶಿಕ್ಷಣ ಇಲಾಖಾಧಿಕಾರಿಗಳು, ತಾಲೂಕಿನ ವಿವಿದೆಡೆಯ ಶಿಕ್ಷಕರು, SDMC ಸಮನ್ವಯ ಸಮಿತಿಯ ಕೂಡ್ಲಿಗಿ ತಾಲೂಕು, ಹಾಗೂ ನೆರೆ ಹೊರೆ ತಾಲೂಕು ಸಮತಿಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2