ನ. 27: ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ (Shirva Nadibettu Soorya – Chandra “Kambala”)
ನ. 27: ಶಿರ್ವ ನಡಿಬೆಟ್ಟು ಸೂರ್ಯ –ಚಂದ್ರ ಜೋಡುಕೆರೆ ಕಂಬಳ
(Shirva) ಶಿರ್ವ : ಇತಿಹಾಸ ಪ್ರಸಿದ್ದ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳವು ನವೆಂಬರ್ 27ನೇ ಬುಧವಾರ (27-11-2024)ರಂದು ಬೆಳಿಗ್ಗೆ 9 ಗಂಟೆಯಿoದ ಸಂಜೆ 5 ಗಂಟೆಯವರೆಗೆ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಲಿದೆ.
ಹಗ್ಗ ಕಿರಿಯ(ಜೂನಿಯರ್) ಮತ್ತು ಹಗ್ಗ ಅತೀ ಕಿರಿಯ (ಸಬ್ ಜೂನಿಯರ್) ವಿಭಾಗದ ಕೋಣಗಳಿಗೆ ಮಾತ್ರ ಸ್ಪರ್ಧೆ ನಡೆಯಲಿದೆ.
ಎಲ್ಲಾ ಕಂಬಳ ಅಭಿಮಾನಿಗಳಿಗೆ ಮದ್ಯಾಹ್ನದ ಊಟದ ವ್ಯವಸ್ಥೆ ಇದೆ ಎಂದು ಶಿರ್ವ ನಡಿಬೆಟ್ಟು ಯಜಮಾನ ದಾಮೋದರ ಚೌಟ ಹಾಗೂ ಕಂಬಳ ವ್ಯವಸ್ಥಾಪಕ ಶಿರ್ವ ನಡಿಬೆಟ್ಟು ಶಶಿಧರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.