# Tags
#ಸಂಘ, ಸಂಸ್ಥೆಗಳು

ಪಡುಕುತ್ಯಾರು ಶ್ರೀ ವಿಶ್ವಕರ್ಮ ಸಮಾಜ ಸಂಘದ  ಪಂಚಮ ವಾರ್ಷಿಕ ಮಹಾಸಭೆ (5th AGM of Padu Kuthyaru Sri Vishwakarma Samaja Sangha)

ಪಡುಕುತ್ಯಾರು ಶ್ರೀ ವಿಶ್ವಕರ್ಮ ಸಮಾಜ ಸಂಘದ  ಪಂಚಮ ವಾರ್ಷಿಕ ಮಹಾಸಭೆ

(Kaup) ಕಾಪು: ಪಡುಕುತ್ಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಐದನೇ ವಾರ್ಷಿಕ ಮಹಾಸಭೆಯು  ಸಂಘದ ಅಧ್ಯಕ್ಷ ನಾಗೇಶ ಆರ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ದುರ್ಗಾ ಮಂದಿರದಲ್ಲಿ ಜರಗಿತು.

   ಮುಖ್ಯ ಅತಿಥಿಯಾಗಿ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮುರಹರಿ ಕೆ ಆಚಾರ್ಯ ಭಾಗವಹಿಸಿದ್ದರು.

 ಅವರು ಮಾತನಾಡಿ, ಪಡುಕುತ್ಯಾರು ಗ್ರಾಮೀಣ ಪ್ರದೇಶದಲ್ಲಿರುವ ವಿಶ್ವಕರ್ಮ ಸಮಾಜ ಸೇವಾ ಸಂಘವು ಉತ್ತಮ ರೀತಿಯಲ್ಲಿಕಾರ್ಯನಿರ್ವಹಿಸುತ್ತಿದ್ದು, ಸಂಘವು ಉತ್ತರೋತರ ಅಭಿವೃದ್ದಿ ಹೊಂದಲಿ ಹಾಗೂ ಮಂದಿರದ ಜೀರ್ಣೋದ್ದಾರ ಕೆಲಸ ಶ್ರೀಘ್ರ ಪ್ರಾರಂಭವಾಗಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಗೌರವಾಧ್ಯಕ್ಷ ಹರಿಶ್ಚಂದ್ರ ಎಚ್ ಆಚಾರ್ಯ ಮಾತನಾಡಿದರು.

ಈ ಸಂದರ್ಭ ಮುಖ್ಯ ಅತಿಥಿ ಮುರಹರಿ ಕೆ ಆಚಾರ್ಯ, ಹಿರಿಯ ಸದಸ್ಯರಾದ ಸಂಜೀವ ಆಚಾರ್ಯ ದಂಪತಿಗಳನ್ನು, ಸ್ಥಳ ದಾನಿ ಶಕುಂತಲ ಆರ್ ಆಚಾರ್ಯ, ಪಿ ಸಂಪತ್ ಕುಮಾರ್, ಪಿ ಮರಳಿಧರ ಆಚಾರ್ಯ, ಸುಪರ್ಣ ಡಿ, ಮತ್ತು ಸಂಘದ ಕಾರ್ಯಧ್ಯಕ್ಷ ಕಾಪು ಜಯರಾಮ ಆಚಾರ್ಯರವರನ್ನು ಸನ್ಮಾನಿಸಲಾಯಿತು.

  ಅತಿ ಹೆಚ್ಚು ಅಂಕ ಪಡೆದ  ವಿದ್ಯಾರ್ಥಿ ಮತ್ತು ಕಲಾ ನೈಪುಣ್ಯತೆ ಹೊಂದಿದ ಸಮಾಜದ  ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ರೀಡಾ ಪಟುಗಳಿಗೆ ಬಹುಮಾನ ವಿತರಿಸಲಾಯಿತು.

  ಈ ಸಂದರ್ಭ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಮೊಕ್ತೇಸರರಾದ  ಬಿಳಿಯಾರು ಗಣಪತಿ ಆಚಾರ್ಯ, ಡಿಂಡಿಬೆಟ್ಟು ಗಂಗಾಧರ ಆಚಾರ್ಯರವರು ಉಪಸ್ಥಿತರಿದ್ದರು.

 ಕೋಶಾಧಿಕಾರಿ ಗಂಗಾಧರ ಎಸ್ ಆಚಾರ್ಯ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.  

 ಮುಂಬೈ ಸಮಿತಿಯ ಅಧ್ಯಕ್ಷ ಮಾಧವ ಎಸ್ ಆಚಾರ್ಯ,  ಕಾರ್ಯಾಧ್ಯಕ್ಷ ಜಯರಾಮ ಆಚಾರ್ಯ, ಗೌರವ ಸಲಹೆಗಾರರಾದ ಮೊಕ್ತೇಸರರಾದ ಪ್ರಕಾಶ್ ಎಸ್ ಆಚಾರ್ಯ, ಚಂದ್ರಯ್ಯ ಪಿ ಆಚಾರ್ಯ, ಉಪಾಧ್ಯಕ್ಷ ಕೆ ವಿವೇಕಾನಂದ ಆಚಾರ್ಯ, ಪದಾಧಿಕಾರಿಗಳಾದ ಪ್ರವೀಣ ಎಸ್ ಆಚಾರ್ಯ, ಪ್ರಕಾಶ್ ಎಸ್ ಆಚಾರ್ಯ, ಉದಯ ಕುಮಾರ್, ಹೇಮಾವತಿ ಪಿ ಆಚಾರ್ಯ, ಪ್ರಸನ್ನ ಎಸ್ ಆಚಾರ್ಯರವರು ಉಪಸ್ಥಿತರಿದ್ದರು.

 ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ ವರದಿ ಮಂಡಿಸಿದರು.

ಅಧ್ಯಕ್ಷರ ಭಾಷಣದೊಂದಿಗೆ ಸಭೆಯು ಮುಕ್ತಾಯಗೊಂಡಿತು.

 ಸುರೇಶ್ ಆರ್ ಆಚಾರ್ಯ ಸ್ವಾಗತಿಸಿದರು. ಲತಾ ಪ್ರಸಾದ್ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಪ್ರಕಾಶ ಆಚಾರ್ಯ ವಂದಿಸಿದರು. 

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2