ಪಡುಬಿದ್ರಿ : ಅಂತರ್‌ರಾಜ್ಯ ಬಂಟ ಕ್ರೀಡೋತ್ಸವದ ಪೂರ್ವಭಾವಿ ಸಭೆ (Padubidri : Preliminary meeting of Inter State Bunts sports festival)
ಪಡುಬಿದ್ರಿ : ಅಂತರ್‌ರಾಜ್ಯ ಬಂಟ ಕ್ರೀಡೋತ್ಸವದ ಪೂರ್ವಭಾವಿ ಸಭೆ
(Padubidri) ಪಡುಬಿದ್ರಿ, ಡಿ. 21: ಬಂಟರ ಸಂಘ ಪಡುಬಿದ್ರಿ ಹಾಗೂ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಆಶ್ರಯದಲ್ಲಿ ಪಡುಬಿದ್ರಿಯ ದಿ. ರಮೇಶ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಡಿ. 29ರಂದು ನಡೆಯಲಿರುವ ಬಂಟ ಕ್ರೀಡೋತ್ಸವ “ಎಂಆರ್‌ಜಿ ಟ್ರೋಫಿ – 2024”ರ ಪೂರ್ವಭಾವಿ ಸಭೆ ನಡೆಯಿತು.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಐಕಳ ಬಾವರವರು ಸಭೆಯ ಅಕ್ಷತೆಯನ್ನು ವಹಿಸಿ ಮಾತನಾಡಿ, ಎಲ್ಲಾ ಸಮಿತಿಗಳ ಸಂಚಾಲಕರು ಹಾಗೂ ಸದಸ್ಯರು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಬೇಕೆಂದರು.
ಸಭೆಯಲ್ಲಿ ಕ್ರೀಡಾ ಕೂಟದ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು.
ದೇಶದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುವ ಬಂಟ ಕ್ರೀಡಾಳುಗಳು ಹಾಗೂ ವಿವಿಧ ರಾಜ್ಯಗಳ ನಾನಾ ಪ್ರದೇಶಗಳಿಂದ ಆಗಮಿಸುವ ಬಂಟರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳನ್ನು ಗೌರವಯುತವಾಗಿ ಅತಿಥಿ ಸತ್ಕಾರ ಮಾಡುವಂತೆ ಸಭೆಯಲ್ಲಿದ್ದವರನ್ನು ವಿನಂತಿಸಲಾಯಿತು.
ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಸಂಘದ ಪ್ರಮುಖರಾದ ವಿಶುಕುಮಾರ್ ಶೆಟ್ಟಿವಾಲ್, ಪ್ರಕಾಶ್ ಶೆಟ್ಟಿ ಪಡುಹಿತ್ಲು, ರವಿ ಶೆಟ್ಟಿ ಗುಂಡ್ಲಾಡಿ, ನವೀನ್ ಎನ್. ಶೆಟ್ಟಿ, ಮಾಧವ ಶೆಟ್ಟಿ, ಹರೀಶ್ ಕುಮಾರ್ ಶೆಟ್ಟಿ ಪಾದೆಬೆಟ್ಟು, ಅನಿಲ್ ಶೆಟ್ಟಿ ಪೇಟೆಮನೆ, ಶ್ರೀನಾಥ್ ಹೆಗ್ಡೆ ನಡ್ಸಾಲು ಗುತ್ತು, ಜಯ ಶೆಟ್ಟಿ ಪದ್ರ, ಶರತ್ ಶೆಟ್ಟಿ, ಸುಜಿತ್ ಶೆಟ್ಟಿ ಪಾದೆಬೆಟ್ಟು, ಮನೋಜ್ ಶೆಟ್ಟಿ ಎರ್ಮಾಳು, ಧನ್‌ಪಾಲ್‌ಶೆಟ್ಟಿ ಅವರಾಲು, ಪ್ರೇಮನಾಥ್ ಶೆಟ್ಟಿ ಹೆಜಮಾಡಿ, ಸುಧಾಕರ ಶೆಟ್ಟಿ ಹೆಜಮಾಡಿ, ಸೀತಾರಾಮ ಶೆಟ್ಟಿ ಪಾದೆಬೆಟ್ಟು, ಉದಯ ಶೆಟ್ಟಿ ಇನ್ನ, ಹರೀಶ್ ಶೆಟ್ಟಿ ಅವರಾಲು, ಸಂದೇಶ್ ಶೆಟ್ಟಿ ಪಾದೆಬೆಟ್ಟು, ಪ್ರಜ್ವಲ್ ಶೆಟ್ಟಿ ಪದ್ರ, ಜ್ಯೋತಿ ಶೆಟ್ಟಿ ಎರ್ಮಾಳು, ಸಂತೃಪ್ತಿ ಎಂ. ಶೆಟ್ಟಿ, ಹೀರಾ ಪ್ರಕಾಶ್ ಶೆಟ್ಟಿ, ಶೋಭಾ ಜೆ. ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ, ಅಕ್ಷತಾ ಶೆಟ್ಟಿ, ಅನಿತಾ ವಿಶುಕುಮಾರ್ ಶೆಟ್ಟಿ, ವಾಣಿ ಆರ್. ಶೆಟ್ಟಿ, ಜ್ಯೋತಿ ರವಿ ಶೆಟ್ಟಿ, ರಶ್ಮಿ ಸುಧಾಕರ ಶೆಟ್ಟಿ, ಭಾರತಿ ಭಾಸ್ಕರ ಶೆಟ್ಟಿ, ಜಯಂತಿ ಶೆಟ್ಟಿ, ಕ್ರೀಡಾ ಸಂಚಾಲಕರಾದ ವಿನಯ ಶೆಟ್ಟಿ ಎರ್ಮಾಳು, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸುಮಂಗಲಾ ಸುನಿಲ್ ಶೆಟ್ಟಿ, ಶರ್ಮಿಳಾ ಆರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.