ಪಡುಬಿದ್ರಿ ಗ್ರಾ. ಪಂ. ಸದಸ್ಯೆ ಶಿವಮ್ಮನಿಧನ (Padubidri Grama Panchayath Member Shivamma passes away)
ಪಡುಬಿದ್ರಿ ಗ್ರಾ. ಪಂ. ಸದಸ್ಯೆ ಶಿವಮ್ಮನಿಧನ
ಪಡುಬಿದ್ರಿ, ಡಿ. 4: ಪಾದೆಬೆಟ್ಟು ನಿವಾಸಿ ಶಿವಮ್ಮ(62) ಡಿ. 3ರಂದು (ಮಂಗಳವಾರ) ಅಸೌಖ್ಯದಿಂದ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಈರ್ವರು ಸಹೋದರಿಯರನ್ನು ಅಗಲಿದ್ದಾರೆ.
ಪಡುಬಿದ್ರಿ ಗ್ರಾ. ಪಂ. ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿದ್ದ ಶಿವಮ್ಮ ಅವರು ಸತತ ಮೂರನೇ ಬಾರಿಗೆ ಪಡುಬಿದ್ರಿ ಗ್ರಾ. ಪಂ. ನ ಪಾದೆಬೆಟ್ಟು ಮೂರನೇ ವಾರ್ಡ್ನ ಭಾಜಪ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿದ್ದರು.
ಶಿವಮ್ಮನವರು ಗ್ರಾಮಾಭಿವೃದ್ಧಿಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದರು.
ಶಿವಮ್ಮನವರ ನಿಧನಕ್ಕೆ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ, ಸದಸ್ಯರು, ಪಂಚಾಯತ್ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.