# Tags
#ಸಂಘ, ಸಂಸ್ಥೆಗಳು

ಪಡುಬಿದ್ರಿ ಜ್ಞಾನಮಂದಿರ: ಭೀಮ ವಾಟರ್ ಪ್ಯೂರಿಫಯರ್‌ನ ಉದ್ಘಾಟನೆ (padubidri Gyana Mandira : Inauguration of Bhima Water Purifier)

 ಪಡುಬಿದ್ರಿ ಜ್ಞಾನಮಂದಿರ: ಭೀಮ ವಾಟರ್ ಪ್ಯೂರಿಫಯರ್ ಉದ್ಘಾಟನೆ

(Padubidri) ಪಡುಬಿದ್ರಿ, ಡಿ.9 : ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸರ್ವೋಚ್ಚ ಸಂಸ್ಥೆ ಶ್ರೀ ವನದುರ್ಗಾ ಟ್ರಸ್ಟ್ ಆಡಳಿತದ ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದಲ್ಲಿ ಭೀಮ ಜ್ಯುವೆಲ್ಲರ್ಸ್‌ ಸಂಸ್ಥೆಯು ಸಾರ್ವಜನಿಕ ಸೇವೆಗಾಗಿ ಹಸ್ತಾಂತರಿಸಿದ ಸುಮಾರು 1.5 ಲಕ್ಷ ರೂ. ಅಂದಾಜು ಮೌಲ್ಯದ ವಾಟರ್ ಪ್ಯೂರಿಫಯರ್‌ಅನ್ನು ಲೋಕಾರ್ಪಣೆಗೈಯ್ಯಲಾಯಿತು.

ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಸುರೇಶ್ ರಾವ್ ಅವರು ಘಟಕವನ್ನು ಉದ್ಘಾಟಿಸಿದರು.

ಭೀಮಾ ಜ್ಯುವೆಲ್ಲರ್ಸ್‌ನ ಸೇಲ್ಸ್ ಆ್ಯಂಡ್ ಆಪರೇಶನ್ ಮ್ಯಾನೇಜರ್ ಗುರುಪ್ರಸಾದ್ ರಾವ್ ಈ ಸಂದರ್ಭ ಉಪಸ್ಥಿತರಿದ್ದು, ಶ್ರೀ ವನದುರ್ಗಾ ಟ್ರಸ್ಟ್‌ನ ಪದಾಧಿಕಾರಿಗಳಿಗೆ ಘಟಕ ಹಸ್ತಾಂತರ ಪತ್ರವನ್ನು ನೀಡಿದರು.

ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಎರಡನೇ ಪಾತ್ರಿ ಹರಿನಾರಾಯಣ ರಾವ್, ಮೂರನೇ ಪಾತ್ರಿ ಸುಬ್ರಹ್ಮಣ್ಯ ರಾವ್, ಅರ್ಚಕರಾದ ರಘುಪತಿ ಆಚಾರ್ಯ, ನಂದಕುಮಾರ್ ಆಚಾರ್ಯ, ಶ್ರೀ ವನದುರ್ಗಾ ಟ್ರಸ್ಟ್‌ನ ಅಧ್ಯಕ್ಷ, ಗುರಿಕಾರ ಕೊರ್ನಾಯ ಪದ್ಮನಾಭ ರಾವ್, ಪ್ರಧಾನ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್, ಟ್ರಸ್ಟಿ ಹಾಗೂ ಗುರಿಕಾರ ಮುರುಡಿ ಜಗದೀಶ ರಾವ್, ಇನ್ನಿತರ ಟ್ರಸ್ಟಿಗಳಾದ ಶ್ರೀನಿವಾಸ ರಾವ್, ರವೀಂದ್ರನಾಥ ಶರ್ಮ, ವಿದ್ಯುತ್ ಗುತ್ತಿಗೆದಾರ ಮುರಲೀಧರ ರಾವ್ ಉಪಸ್ಥಿತರಿದ್ದರು.

ಮುಂದಿನ ಜನವರಿಯಲ್ಲಿ ಆರಂಭಗೊಳ್ಳುವ ಪಡುಬಿದ್ರಿ ಢಕ್ಕೆಬಲಿ ಸೇವೆಗಳ ಸಂದರ್ಭದಲ್ಲಿ ಭೀಮ ಜ್ಯುವೆಲ್ಲರ್ಸ್‌ನ ಈ ಕೊಡುಗೆಯು ಬಹಳವಾಗಿ ಸದುಪಯೋಗವಾಗಲಿರುವುದಾಗಿ ಶ್ರೀ ಖಡ್ಗೇಶ್ವರೀ ವನದುರ್ಗಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್ ತಿಳಿಸಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2