ಪಡುಬಿದ್ರಿ ಪಟ್ರಾಮ ಕೃಷ್ಣಾನಂದ ರಾವ್ ನಿಧನ (Padubidri Patrama Krishnananda Rap Passes away)
ಪಡುಬಿದ್ರಿ ಪಟ್ರಾಮ ಕೃಷ್ಣಾನಂದ ರಾವ್ ನಿಧನ
(Padubiddri) ಪಡುಬಿದ್ರಿ, ಡಿ. 5: ಬೇಂಗ್ರೆ ಮಧ್ವ ನಗರದ ನಿವಾಸಿ ಪಟ್ರಾಮ ಕೃಷ್ಣಾನಂದ ರಾವ್(72) ಹೃದಯಾಘಾತದಿಂದ ಡಿ. 5ರಂದು ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕೊಯಮತ್ತೂರಿನಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಅವರು, ಪಡುಬಿದ್ರಿಯಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದರು. ಕೃಷಿಕರಾಗಿ ಸಾವಯವ ಕೃಷಿಗೆ ಒತ್ತುಕೊಟ್ಟು, ಇಂದಿಗೂ ಬೇಸಾಯವನ್ನು ಮಾಡುತ್ತಿದ್ದರು.
ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ವನದುರ್ಗಾ ಟ್ರಸ್ಟ್‌ನ ಟ್ರಸ್ಟಿಯಾಗಿ ಕೆಲ ವರ್ಷಗಳ ಕಾಲ ಇವರು ಸೇವೆ ಸಲ್ಲಿಸಿದ್ದರು. ಎಳೆವೆಯಿಂದಲೇ ಆರೆಸ್ಸೆಸ್‌ನ ಅನುಯಾಯಿಯಾಗಿದ್ದ ಇವರು, ಜನಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಇವರ ಹೊಟೇಲ್‌ನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಚಟುವಟಿಕೆಗಳ ಅನೇಕ ಬೈಠಕ್‌ಗಳು ನಡೆಯುತ್ತಿದ್ದವು.
ಈಗಿನ ಮಹಾರಾಷ್ಟ್ರ ರಾಜ್ಯಪಾಲ ಸಿ. ಪಿ. ರಾಧಾಕೃಷ್ಣನ್ ಅವರ ನಿಕಟವರ್ತಿಯಾಗಿದ್ದರು.
ಕೃಷ್ಣಾನಂದ ರಾವ್ ನಿಧನಕ್ಕೆ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ರಮಾಕಾಂತ ದೇವಾಡಿಗ, ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್, ತರಂಗಿಣಿ ಮಿತ್ರ ಮಂಡಳಿ ಅಧ್ಯಕ್ಷ ರಮಾಕಾಂತ ರಾವ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.