ಪಾರ್ಶ್ವವಾಯು ಪೀಡಿತ ವ್ಯಕ್ತಿ ನಾಪತ್ತೆ : ದೂರು (Paralytic person missing : Complaint)
ಪಾರ್ಶ್ವವಾಯು ಪೀಡಿತ ವ್ಯಕ್ತಿ ನಾಪತ್ತೆ : ದೂರು
(Padubidri) ಪಡುಬಿದ್ರಿ : ಪಡುಬಿದ್ರಿ ಠಾಣಾ ವ್ಯಾಪ್ತಿಯ ಇನ್ನ ಗ್ರಾಮದ ಪಾರ್ಶ್ವವಾಯು ಪೀಡಿತ ವ್ಯಕ್ತಿಯೋರ್ವರು ಮನೆಯಿಂದ ಮೂಲ್ಕಿಗೆ ಹೋಗಿ ಬರುವುದಾಗಿ ಹೇಳಿ ನ. 25ರಂದು ಬೆಳಿಗ್ಗೆ ಮನೆಬಿಟ್ಟು ತೆರಳಿದ್ದ ಶಂಕರ ಜೆ. ಪೂಜಾರಿ (53) ಮರಳಿ ಮನೆಗೆ ಬಾರದೇ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರ ಜೆ. ಪೂಜಾರಿಯವರು ಪಾರ್ಶ್ವವಾಯು ಪೀಡಿತರಾಗಿದ್ದು, ಇವರಿಗೆ ಬಲಗೈ ಸ್ವಾಧೀನ ಇಲ್ಲ. ಇವರು ಮೂಲ್ಕಿಯತ್ತ ಹೋಗದೇ ಉಡುಪಿ ಬಸ್ ನಿಲ್ದಾಣದವರೆಗೆ ಹೋಗಿ ಬಳಿಕ ಕಾಣೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಿಳಿ ಬಣ್ಣದ ಅಂಗಿ, ಕಪ್ಪು ಬಣ್ಣದ ಬರ್ಮುಡಾ ಧರಿಸಿರುವ ಇವರು 5.8 ಅಡಿ ಎತ್ತರ, ಕನ್ನಡ, ತುಳು ಮತ್ತು ಹಿಂದಿ ಮಾತಾಡಬಲ್ಲವರಾಗಿದ್ದಾರೆ.
ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ ಹೊಂದಿರುವ ಇವರ ಬಗೆಗೆ ಯಾರಿಗಾದರೂ ಮಾಹಿತಿ ಲಭಿಸಿದ್ದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ (0820 2555452)ಯನ್ನು ಸಂಪರ್ಕಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ.