ಪೆರ್ನಾಜೆಯಲ್ಲಿ ಸತತ ಮೂರು ದಿನಗಳಿಂದ ಬೀಡು ಬಿಟ್ಟ ಕಾಡಾನೆ, ಜನರಲ್ಲಿ ಆತಂಕ ( The Elephant problem in Pernaje : people are worried
ಪೆರ್ನಾಜೆಯಲ್ಲಿ ಸತತ ಮೂರು ದಿನಗಳಿಂದ ಬೀಡು ಬಿಟ್ಟ ಕಾಡಾನೆ, ಜನರಲ್ಲಿ ಆತಂಕ
(Putturu, Pernaje) ಪುತ್ತೂರು, ಪೆರ್ನಾಜೆ: ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡುವುದೇ ತಪ್ಪೇನು ಎಂಬಂತೆ, ಒಂದೆಡೆ ಕಾಡುಪ್ರಾಣಿಗಳ ಹಾವಳಿಯಾದರೆ ಮತ್ತೊಂದೆಡೆ ಮಳೆಯ ಚೆಲ್ಲಾಟದಿಂದ ಕೃಷಿಕ ಕಂಗಾಲಾಗಿದ್ದಾನೆ.
ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯು ಕಾಸರಗೋಡಿನ ಪರಪೆಯಿಂದ ಮುಗೇರು ಯರು ಸುಳ್ಯ ತಾಲೂಕು ಕನಕಮಜಲು ರಕ್ಷಿತಾ ಅರಣ್ಯದಿಂದ ಕೂಡಿದೆ. ಈ ಪ್ರದೇಶದಲ್ಲಿ ಕಾಡಾನೆ ಕಾಟ ಹೆಚ್ಚಾಗಿದ್ದು, ಬಾಳೆ ತೋಟ, ಕಂಗಿನ ಮರಗಳನ್ನು ಆನೆ ಹಾನಿಗೊಳಸಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಮಾರ ಪೆರ್ನಾಜೆಯವರ ಬಾಳೆ ತೋಟವನ್ನು ಆನೆ ಹಿಂಡು ಚಿದ್ರಗೊಳಿಸಿದೆ. ಆನೆ 25ಕ್ಕೂ ಮಿಕ್ಕಿ ಬಾಳೆ ಗಿಡಗಳನ್ನು ನಾಶ ಮಾಡಿದ್ದು, ಬಹಳಷ್ಟು ಅಡಕೆ ಸಸಿಗಳಿಗೂ ಹಾನಿಯಾಗಿದೆ.
ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂಧಿಸುವಂತೆ ಕೃಷಿಕರು ಆಗ್ರಹಿಸಿದ್ದಾರೆ.
ಕಾಡಾನೆ ಸಮಸ್ಯೆ