# Tags
#PROBLEMS

ಫೆಂಗಲ್ ಚಂಡಮಾರುತದ ಅಬ್ಬರ : ಯಕ್ಷಗಾನ ಮೇಳಗಳಿಗೂ ಸಮಸ್ಯೆ (Surge of  Cyclone Fengal : A problem for Yakshagana too)

ಫೆಂಗಲ್ ಚಂಡಮಾರುತದ ಅಬ್ಬರ : ಯಕ್ಷಗಾನ ಮೇಳಗಳಿಗೂ ಸಮಸ್ಯೆ

(Udupi) ಉಡುಪಿ: ಫೆಂಗಲ್ ಚಂಡಮಾರುತದ ಅಬ್ಬರದಿಂದ ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಯಕ್ಷಗಾನ ಮೇಳಗಳಿಗೂ ಸಮಸ್ಯೆ ಎದುರಾಗಿದೆ.

 ಉಡುಪಿಯಲ್ಲಿ ಶ್ರೀ ಕ್ಷೇತ್ರ ಮಂದಾರ್ತಿ ಯಕ್ಷಗಾನ ಮೇಳದ ಚೌಕಿಯೊಳಗೆ ಮಳೆ ನೀರು ನುಗ್ಗಿದೆ. ವೇಷಧಾರಿಗಳು ಬಣ್ಣ ಹಾಕುವ ಚೌಕಿ ಮನೆಯ ತುಂಬೆಲ್ಲ ನೀರು ತುಂಬಿದೆ.

ಮಳೆಯಿಂದಾಗಿ ಸೋಮವಾರ ರಾತ್ರಿಯ ಬಹುತೇಕ ಯಕ್ಷಗಾನಗಳು ರದ್ದಾಗಿವೆ. ಚೌಕಿ ಮನೆಯ ಒಳಗೆ ದೇವರ ಪೂಜೆಯ ಸಲಕರಣೆ, ವೇಷಧಾರಿಗಳ ಪೆಟ್ಟಿಗೆಗಳಿಗೆ ನೀರು ನುಗ್ಗುವ ಮೊದಲು ಮೇಳದ ವಾಹನದಲ್ಲಿ ಇಡಲಾಯಿತು.

 ಮಳೆಗಾಲ ಮುಗಿದ ನಂತರವೇ ಯಕ್ಷಗಾನ ಆರಂಭವಾಗುವುದು ಪ್ರತೀತಿ. ಆದರೆ, ಈ ಬಾರಿ ಡಿಸೆಂಬರ್ ತಿಂಗಳಲ್ಲೂ ಮಳೆ ಸುರಿಯುತ್ತಿದೆ. ಇದರಿಂದ ನಿರಂತರ ಪ್ರದರ್ಶನಗಳು ರದ್ದಾಗುತ್ತಿವೆ. ಆ ಕಾರಣದಿಂದ  ಕಲಾವಿದರು ಮತ್ತು ಪ್ರೇಕ್ಷಕರು ಬೇಸರಗೊಂಡಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2