ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “ಪ್ಲಾಸ್ಮಾ 2ಕೆ24”ನಲ್ಲಿ ಬಹುಮಾನ (Bantakal Engineering College Students awarded in “Plasma 2K24”
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “ಪ್ಲಾಸ್ಮಾ 2ಕೆ24”ನಲ್ಲಿ ಬಹುಮಾನ
(Banatkal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಿವಮೊಗ್ಗ ಜೆ ಎನ್ ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ “ಪ್ಲಾಸ್ಮಾ 2ಕೆ24” ತಾಂತ್ರಿಕ ವಿಚಾರ ಸಂಕಿರಣದಲ್ಲಿ ಭಾಗವಹಿಸಿ “ಕೋಡ್ – ಸ್ಪಿರಿಟ್”ಹ್ಯಾಕಥಾನ್‌ನಲ್ಲಿ ಬಹುಮಾನ ಪಡೆದಿದ್ದಾರೆ.
“ಕೋಡ್ – ಸ್ಪಿರಿಟ್”ಹ್ಯಾಕಥಾನ್‌ನ ಮೊದಲ ಹಂತದ ಸತತ ಏಳು ಗಂಟೆಗಳ ಸ್ಪರ್ಧೆಯಲ್ಲಿ ರಾಷ್ಟ್ರಾದ್ಯಂತ ಒಟ್ಟು 27 ತಂಡಗಳು ಭಾಗವಹಿಸಿದ್ದು, ಅಂತಿಮ ಸುತ್ತಿಗೆ 16 ತಂಡಗಳು ಆಯ್ಕೆಯಾಗಿದೆ.
ಅಂತಿಮ ಸುತ್ತಿಗೆ ಆಯ್ಕೆಯಾದ ವಿದ್ಯಾಸಂಸ್ಥೆಯ ತಂಡದಲ್ಲಿ ದ್ವಿತೀಯ ವರ್ಷದ ಗಣಕಯಂತ್ರ ವಿಭಾಗದ ವಿದ್ಯಾರ್ಥಿ ತೇಜಸ್ ನಾಯಕ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೇನ್ಸ್ ವಿಭಾಗದ ಭೂಷಣ್ ಪೂಜಾರಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ಪೂರ್ಣಾನಂದ ಮತ್ತು ಶಿವಂ ಶೆಟ್ಟಿ ಇವರು ಭಾಗವಹಿಸಿದ್ದು, ಈ ಹ್ಯಾಕಥಾನ್ ಸ್ಪರ್ಧೆಯ ಪ್ರಥಮ ಸ್ಥಾನಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ಸಹ ಪಠ್ಯೇತರ ಚಟುವಟಿಕೆಯ ಸಂಯೋಜಕರು ಅಭಿನಂದಿಸಿದ್ದಾರೆ.